Tuesday, January 21, 2025
ಸುದ್ದಿ

ಗೃಹಿಣಿಯೊಂದಿಗೆ ಪರಾರಿಯಾದ ಮಗ: ಮಗನ ನೆನಪಿನಲ್ಲಿ ಹೆತ್ತವರು ಆತ್ಮಹತ್ಯೆ – ಕಹಳೆ ನ್ಯೂಸ್

ರಾಮನಗರ: ಇರುವುದು ಒಬ್ಬನೇ ಮಗ ಒಳ್ಳೆಯ ಕಡೆಗೆ ಸಂಬಂಧ ನೋಡಿ ಬೇಗ ಮದುವೆ ಮಾಡಬೇಕು ಎನ್ನುವಷ್ಟರಲ್ಲಿ ಹೆತ್ತವರ ಆಸೆಗೆ ತಣ್ಣೀರೆರೆಚಿ ಗೃಹಿಣಿ ಹಿಂದೆ ಓಡಿಹೋದ ಮಗನ ನೆನಪಿನಲ್ಲಿ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಸಿದ್ದರಾಜು, ಸಾಕಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಗ ಮನು ಓಡಿಹೋದ ಯುವಕ. ಅದೇ ಗ್ರಾಮದ ಪಲ್ಲವಿ ಎಂಬ ಗೃಹಿಣಿಯ ಜೊತೆಗೆ ಓಡಿ ಹೋಗಿದ್ದಕ್ಕೆ ಇಡೀ ಕುಟುಂಬ ತಲೆ ತಗ್ಗಿಸುವಂತಾಗಿದೆ ಎಂದು ನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು