Tuesday, January 21, 2025
ಸುದ್ದಿ

ಒಂದೇ ಹುತ್ತದೊಳಗೆ ಎರಡು ನಾಗರಹಾವು ಪ್ರತ್ಯಕ್ಷ – ಕಹಳೆ ನ್ಯೂಸ್

ಚಿಕ್ಕಮಗಳೂರು: ಒಂದೇ ಹುತ್ತದೊಳಗೆ ಎರಡು ನಾಗರಹಾವು ಕಾಣಿಸಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಕೊಟ್ಟಿಗೆಹಾರದ ರಿಚರ್ಡ್ ಲೋಬೋ ಎಂಬುವರ ಕಾಫಿ ತೋಟದಲ್ಲಿದ ಹುತ್ತದಲ್ಲಿ ಎರಡು ನಾಗರಹಾವು ಕಾಣಿಸಿಕೊಂಡಿವೆ, ಎರಡು ನಾಗರಹಾವು ಕಂಡು ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ಭಯಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ತೋಟದ ಮಾಲೀಕ ಉರಗ ತಜ್ಞ ಆರೀಫ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗತಜ್ಞ ಆರೀಫ್ ಎರಡು ನಾಗರ ಹಾವುಗಳನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.