Thursday, November 14, 2024
ಸುದ್ದಿ

ಬೀದಿ ಬದಿ ವ್ಯಾಪಾರಿಗಳ ಮತ್ತು ರೈಲ್ವೇ ಇಲಾಖೆಯ ಜಗಳ – ಕಹಳೆ ನ್ಯೂಸ್

ಮಂಗಳೂರು: ಪರಂಗಿಪೇಟೆಯಲ್ಲಿ ರಸ್ತೆ ಬದಿ ವ್ಯಾಪಾರ ಸ್ಥಳ ಮತ್ತು ರೈಲ್ವೆ ಇಲಾಖೆಯವರ ನಡುವೆ ಪೈಟ್ ನಡೆಯುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಪರಂಗಿಪೇಟೆಯ ರಸ್ತೆಯ ಬದಿಯಲ್ಲಿ ಮೀನು, ಕೋಳಿ, ತರಕಾರಿ ಸೇರಿದಂತೆ ಅನೇಕ ಅಂಗಡಿಗಳು ಅನೇಕ ವರ್ಷಗಳಿಂದ ಕಾರ್ಯಚರಿಸುತ್ತಿತ್ತು. ಅದರೆ ಇವರು ವ್ಯಾಪಾರ ಮಾಡುವ ಜಾಗ ಅದು ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ. ಹಾಗಾಗಿ ಬೀದಿಬದಿಯ ಅಂಗಡಿಗಳನ್ನು ತೆರವುಗೊಳಿಸಲು ಅಂಗಡಿಯ ಮಾಲೀಕರಿಗೆ ತಿಂಗಳ ಹಿಂದೆ ನೋಟೀಸ್ ನೀಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೋಟೀಸ್‌ಗೆ ಯಾವುದೇ ಸ್ಪಂದನೆ ನೀಡದ ಅಂಗಡಿಯವರು ಅಕ್ರಮವಾಗಿ ಮಾರಾಟ ಮುಂದುವರಿಸಿದರು. ಹಾಗಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು, ರೈಲ್ವೆ ಪೊಲೀಸರ ಜೊತೆ ಇಂದು ಬೆಳಿಗ್ಗೆ ಪರಂಗಿಪೇಟೆಗೆ ಅಗಮಿಸಿ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು. ಅದಕ್ಕೆ ವಿರೋಧ ಪಡಿಸಿದ ಅಂಗಡಯವರು ಮೂರು ತಿಂಗಳ ಕಾಲ ಅವಕಾಶ ನೀಡುವಂತೆ ಕೇಳುತ್ತಿದ್ದಾರೆ.

ರೈಲ್ಬೆ ಇಲಾಖೆಯವರು ಕೇವಲ ಒಂದು ಗಂಟೆ ಅವಕಾಶ ನೀಡುತ್ತೇವೆ, ಮತ್ತು ಅಂಗಡಿಗಳನ್ನು ಕಾಲಿ ಮಾಡದಿದ್ದರೆ ತೆರವುಗೊಳಿಸುವ ಎಚ್ಚರಿಕೆ ನೀಡಿದ್ದಾರೆ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ರೈಲ್ವೆ ಪೋಲೀಸ್ ರು ಬಂದೋಬಸ್ತ್ ವ್ಯವಸ್ಥೆ ಮತ್ತು ಡ್ರೋನ್ ಕ್ಯಾಮರಾ ಅಳವಡಿಸಿದ್ದಾರೆ.