Monday, January 20, 2025
ಸುದ್ದಿ

3 ದಿನದಲ್ಲಿ ಮರಳುಗಾರಿಕೆ ಆರಂಭಿಸದಿದ್ದರೆ ಪರವಾನಗಿ ರದ್ದು: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ – ಕಹಳೆ ನ್ಯೂಸ್

ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಪರವಾನಗಿ ಪಡೆದವರು ಮೂರು ದಿನದಲ್ಲಿ ಮರಳುಗಾರಿಕೆ ಆರಂಭಿಸದಿದ್ದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಮರಳು ದಿಬ್ಬ ತೆರವು ಮಾಡದವರ ಪರವಾನಗಿ ರದ್ದು ಮಾಡುವುದು ಮಾತ್ರವಲ್ಲ, ಮತ್ತೆ ಎಂದಿಗೂ ಪರವಾನಗಿ ನೀಡುವುದಿಲ್ಲ. ಮರಳು ದಿಬ್ಬ ತೆರವಿಗೆ ಪೊಲೀಸ್ ರಕ್ಷಣೆ ಕೇಳಿದರೆ ಕೊಡಲು ಸಿದ್ಧ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

2011ಕ್ಕಿಂತ ಮೊದಲು ಮರಳುಗಾರಿಕೆ ಮಾಡುತ್ತಿದ್ದ 45 ಮಂದಿಯಲ್ಲಿ 37 ಮಂದಿ ಪರವಾನಗಿ ಪಡೆಯಲು ಹಣ ಪಾವತಿಸಿದ್ದಾರೆ. ಐದು ಮಂದಿಗೆ ಪರವಾನಗಿ ನೀಡಿದ್ದರೂ, ಮರಳು ದಿಬ್ಬ ತೆರವು ಪ್ರಕ್ರಿಯೆ ಆರಂಭಿಸಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದಿನ 170 ಪರವಾನಗಿದಾರರಿಗೂ ಮರಳು ದಿಬ್ಬ ತೆರವಿಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, 2011ಕ್ಕಿಂತ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ತೊಡಗಿದವರಿಗಷ್ಟೇ ಅವಕಾಶವಿದ್ದು, ದಾಖಲೆ ಪರಿಶೀಲಿಸಿ ಪರವಾನಗಿ ನೀಡಬೇಕಿದೆ.

ಸಿಆರ್‌ಝಡ್ ಮರಳು ದಿಬ್ಬ ತೆರವಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸೂಚಿಸಿದೆ. ಕೋಡಿಯಲ್ಲಿ 40,000 ಟನ್ ಮರಳು ಲಭ್ಯವಿದ್ದು, ಸರ್ಕಾರಿ ಕಾಮಗಾರಿ ಸಹಿತ ಸಾರ್ವಜನಿಕರಿಗೂ ಯುನಿಟಿಗೆ 518 ರೂ. ದರದಲ್ಲಿ ಲಭ್ಯವಿದೆ. ನಾನ್ ಸಿಆರ್‌ಝಡ್ ವ್ಯಾಪ್ತಿಯ 16 ಬ್ಲಾಕ್‌ಗಳ ಟೆಂಡರ್ ಪರಿಶೀಲನೆ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.