ಬೆಂಗಳೂರು: ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗಿದೆ. ಹಲವು ಬಾರಿ ದಿನಾಂಕ ಘೋಷಿಸಿದ್ದರೂ ವಿವಿಧ ಕಾರಣ ಹೇಳಿ ಅದನ್ನು ಮುಂದೂಡುತ್ತಲೇ ಬಂದಿದ್ದ ಮೈತ್ರಿ ಕೂಟ ಈಗ ಡಿಸೆಂಬರ್ 22 ಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ.
ಸಂಪುಟ ವಿಸ್ತರಣೆಗೆ ದಿನಾಂಕ ಖಚಿತವಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿ ಶಾಸಕರುಗಳ ಚಟುವಟಿಕೆ ಗರಿಗೆದರಿದೆ. ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿಕೊಂಡು ಕೆಲ ಕಾಂಗ್ರೆಸ್ ಶಾಸಕರು ಸಚಿವ ಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ.
ಇನ್ನು ಜೆಡಿಎಸ್‌ನಲ್ಲಿ ವರಿಷ್ಠನ ತೀರ್ಮಾನವೇ ಅಂತಿಮವಾಗಿದ್ರೂ ಒತ್ತಡ ಹೇರುವ ಮೂಲಕ ಸಚಿವ ಸ್ಥಾನ ಪಡೆಯಲು ತೆನೆ ಶಾಸಕರುಗಳು ಮುಂದಾಗಿದ್ದಾರೆ.
ಸಂಪುಟ ವಿಸ್ತರಣೆ ಜೊತೆಗೆ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ನಡೆಯಲಿದೆ ಎನ್ನಲಾಗಿದ್ದು, ಈ ಮೂಲಕ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಶಮನ ಮಾಡಲು ನಾಯಕರು ಮುಂದಾಗಿದ್ದಾರೆ.