Monday, January 20, 2025
ಸುದ್ದಿ

ಮೊಸಳೆಯ ಪಾಲಾಗುತ್ತಿದ್ದ ಚಿಕ್ಕಪ್ಪನನ್ನು ರಕ್ಷಿಸಿ ಸಾಹಸ ಮೆರೆದ ಬಾಲಕನಿಗೆ ಪ್ರಧಾನಿಯಿಂದ ಶೌರ್ಯ ಪ್ರಶಸ್ತಿ – ಕಹಳೆ ನ್ಯೂಸ್

ಒಡಿಶಾ: ಮೊಸಳೆಯ ಪಾಲಾಗುತ್ತಿದ್ದ ತನ್ನ ಚಿಕ್ಕಪ್ಪನನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಒಡಿಶಾದ ಕೇಂದ್ರ ಪಾಡಾ ಜಿಲ್ಲೆಯ ಕಂದಿರಾ ಗ್ರಾಮದಲ್ಲಿ ನಡೆದಿದೆ.

ಕಳೆದ ಫೆ. 20 ರಂದು ಸೀತು ಮಲಿಕ್ ಅವರ ಚಿಕ್ಕಪ್ಪ ಬಿನೋದ್ ಮಲಿಕ್ ಗ್ರಾಮದ ಕೆರೆಯಲ್ಲಿ ಈಜುತ್ತಿದ್ದಾಗ ಮೊಸಳೆ ಬಾಯಿಗೆ ಸಿಲುಕಿ ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗ ಅವರು ಗಾಬರಿಯಿಂದ ಕಿರುಚಿದಾಗ ಸ್ಥಳಕ್ಕೆ ಧಾವಿಸಿದ್ದ ಸೀತು, ಬಿದಿರು ಕೋಲಿನಿಂದ ಮೊಸಳೆ ಹಣೆಗೆ ಹೊಡೆದು ಚಿಕ್ಕಪ್ಪನನ್ನು ರಕ್ಷಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಸ ಮೆರೆದ 15 ರ ಬಾಲಕನನ್ನು 2019 ರ ಜ. 23 ರಂದು ಭಾರತೀಯ ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.