ದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ.
ಇದೇ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ, ಅಜಾತಶತ್ರು ದಿವಂಗತ ವಾಜಪೇಯರ 94 ನೇ ಜನ್ಮ ಜಯಂತಿ ಆಗಿದ್ದು, ಈ ಹಿನ್ನೆಲೆಯಲ್ಲಿ ಹೊಸ 100 ರೂ. ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತೆ.
35 ಗ್ರಾಂ ತೂಕದ ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಚಿತ್ರ ಹಾಗೂ ಅದರ ಕೆಳಗೆ ವಾಜಪೇಯಿ ಅವರ ಹೆಸರು ಮತ್ತು ಜನನ ಹಾಗೂ ಮರಣ ವರ್ಷ ನಮೂದಿಸಲಾಗಿರುತ್ತದೆ.
ಒಂದು ಬದಿಯಲ್ಲಿ ಅಶೋಕ ಸ್ತಂಭದ ಲಾಂಛನದ ಕೆಳಗೆ ಸತ್ಯಮೇವ ಜಯತೆ ಹಾಗೂ ಅದರಡಿ 100 ರೂ. ಎಂದು ಬರೆದಿರುತ್ತೆ. ಮತ್ತೊಂದು ಬದಿಯಲ್ಲಿ ಭಾರತ ಹಾಗೂ ಮತ್ತೊಂದು ಬದಿಯಲ್ಲಿ ಇಂಡಿಯಾ ಎಂದು ದೇವನಾಗರಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತೆ.