Tuesday, January 21, 2025
ಸುದ್ದಿ

ವನ್ಯಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದ ಭೇಟೆಗಾರರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದ ಭೇಟೆಗಾರರನ್ನು ಬಂಟ್ವಾಳ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ಕೊಡ್ಯಮಲೆ ಮೀಸಲು ಅರಣ್ಯದ ಮಯ್ಯಿದೊಟ್ಟು ಎಂಬಲ್ಲಿ ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು 4 ಮಂದಿ ಬೇಟೆಗಾರರನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳನ್ನು ಸರಪಾಡಿ ಗ್ರಾಮದ ಸುಲೈಮಾನ್, ಅಹಮ್ಮದ್ ಶರೀಫ್, ಝೈನುದ್ದೀನ್ ಹಾಗೂ ದೇವಸ್ಯ ಪಡೂರು ಗ್ರಾಮದ ಅಬ್ದುಲ್ ಕುಂಞ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರಿಂದ 1 ಕೋವಿ ಹಾಗೂ ಅದರ ಪರಿಕರಗಳು, 1 ಚಾಕು ಹಾಗೂ 2 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಟ್ವಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.