Tuesday, January 21, 2025
ಸುದ್ದಿ

ಮಗನ ಅವಾಂತರದಿಂದ ತಾಯಿ ಮೇಲೆ ಮಾರಣಾಂತಿಕ ಹಲ್ಲೆ – ಕಹಳೆ ನ್ಯೂಸ್

ಸುಳ್ಯ: ಮಗನ ಅವಾಂತರದಿಂದ ತಾಯಿ ನಿವೃತ್ತ ಶಿಕ್ಷಕಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಅಮಾನುಷ ಕೃತ್ಯ ಸುಳ್ಯ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ. ಭವಾನಿ ಎಂಬುವವರು ಹಲ್ಲೆಗೊಳಗಾದವರಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಪೂರ್ಣೇಶ್ ವ್ಯಾಪಾರ ನಡೆಸುತ್ತಿದ್ದು ಹಲವಾರು ಜನರಿಂದ ಲಕ್ಷಾಂತರ ಹಣ ಸಾಲ ಪಡೆದಿದ್ರು ಎನ್ನಲಾಗಿದೆ. ಸಾಲನೀಡಿದವರು ಮನೆಗೆ ಬಂದು ಸಾಲ ಕೇಳಲು ಶುರು ಮಾಡಿದಾಗ ಪೂರ್ಣೇಶ್ ತಲೆಮರೆಸಿಕೊಂಡು, ಯಾರ ಸಂಪರ್ಕಕ್ಕು ಸಿಗದೆ ತಪ್ಪಿಸಿಕೊಂಡಿದ್ರು ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಲಕ್ಷಾಂತರ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದ ಎಣ್ಮೂರು ಮೂಲದ ಸುಳ್ಯದ ಒಡಬ್ಯಾ ನಿವಾಸಿ ಪಿ. ಪುಟ್ಟಪ್ಪ ಮತ್ತು ಅವರ ಪುತ್ರ ಪವನ್, ಡಿ. 11 ರಂದು ಭವಾನಿ ಯವರ ಮನೆಗೆ ಬಂದು ಅವಾಚ್ಯ ಪದದಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಸ್ವಸ್ಥ ಪತಿಯೆದುರು ಭವಾನಿಯವರ ಕೂದಲು ಹಿಡಿದು, ತಲೆಯನ್ನು ಗೋಡೆಗೆ ಗುದ್ದಿ, ಕಾಲಿನಿಂದ ಒದ್ದು ಹೊಟ್ಟೆಯ ಭಾಗ ಮತ್ತು ಸೂಕ್ಷ್ಮ ಭಾಗವನ್ನು ಕೈಯಿಂದ ಕಿವುಚಿ ಮನೆಯಿಂದ ಹೊರಗೆ ಎಳೆದು ತಂದಿದ್ದಾರೆ.

ಈ ಸಂದರ್ಭದಲ್ಲಿ ಜೋರಾಗಿ ಬೊಬ್ಬೆ ಹೊಡೆದುಕೊಂಡಾಗ ಸ್ಥಳೀಯರು ಒಡಿಬಂದ ಹಿನ್ನಲೆಯಲ್ಲಿ ಆರೋಪಿ ಮನೆ ಬಿಟ್ಟು ತೆರಳಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಆರೋಪಿಗಳ ಮೇಲೆ ಎಸ್ಪಿ, ಐಜಿಪಿಗೆ ದೂರು ಸಲ್ಲಿಸಿದ್ದಾರೆ.