Recent Posts

Sunday, January 19, 2025
ಸಿನಿಮಾಸುದ್ದಿ

ದಾಖಲೆ ಸೃಷ್ಟಿಸಿದ ಸೂಪರ್‌ಸ್ಟಾರ್ ಸಿನಿಮಾ: 695 ಕೋಟಿ ಕಲೆಕ್ಷನ್ ಮಾಡಿದ 2.0 ಸಿನಿಮಾ – ಕಹಳೆ ನ್ಯೂಸ್

ಕಾಲಿವುಡ್‌ನ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 2.0 ಸಿನಿಮಾ ದಿನೇ ದಿನೇ ಒಂದೊಂದು ಸ್ಪೆಷಲ್‌ನಿಂದ ಸಾಕಷ್ಟು ಸೌಂಡ್ ಮಾಡ್ತಿದೆ.

ಮೊನ್ನೆಯಷ್ಟೇ 500 ಕೋಟಿಯನ್ನು ಒಂದೇ ವಾರದಲ್ಲಿ ಗಳಿಸುವ ಮೂಲಕ ದಾಖಲೆಯನ್ನ ಸೃಷ್ಟಿಸಿದ ಈ ಸಿನಿಮಾ ಇದೀಗ ಮತ್ತೊಂದು ರೆಕಾರ್ಡ್ ಬ್ರೇಕ್ ಹಿಸ್ಟರಿ ಕ್ರಿಯೇಟ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೂಪರ್‌ಸ್ಟಾರ್ ರಜನಿ ಮತ್ತು ಅಕ್ಷಯ್ ಅಭಿನಯದ ‘2.0’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಕ್ಕೊಂದು ದಾಖಲೆ, ದಿನಕ್ಕೊಂದು ಇತಿಹಾಸ ನಿರ್ಮಿಸುತ್ತಾ ಮುಂದೆ ಸಾಗುತ್ತಿದೆ. ಸದ್ಯ, 13 ದಿನದಲ್ಲಿ 600 ಕೋಟಿ ಗಳಿಸಿರುವ ರಜನಿ ಸಿನಿಮಾ ಹತ್ತು ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಸಾರ್ವಕಾಲಿಕ ಹಿಟ್ ಸಿನಿಮಾ ಎನಿಸಿಕೊಂಡಿರುವ ದಂಗಲ್ ಚಿತ್ರದ ದಾಖಲೆ ಹಾಗೂ ಬಾಹುಬಲಿ ಚಿತ್ರದ ದಾಖಲೆಯೊಂದನ್ನು ‘2.0’ ಉಡೀಸ್ ಮಾಡಿದ್ದು, ನಿನ್ನೆಯವರೆಗೆ ಸುಮಾರು 695 ಕೋಟಿ ಕಲೆಕ್ಷನ್ ಮಾಡಿದೆ.