ಚಿಕ್ಕಮಗಳೂರು: ಬಹು ಬೇಡಿಕೆಯ ಉಡ ಹಾಗೂ ಚಿಪ್ಪು ಹಂದಿಯ ಬಿಡಿ ಭಾಗಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನ ಅರಣ್ಯಾಧಿಕಾರಿಗಳು ಬಂಧಿಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಇಬ್ಬರು ವ್ಯಕ್ತಿಗಳು ಚಿಪ್ಪು ಹಂದಿ ಬಿಡಿ ಭಾಗ ಮತ್ತು ಉಡ ಪ್ರಾಣಿಯ ಗುಪ್ತಾಂಗ ಭಾಗಗಳನ್ನ ಮಾರಾಟ ಮಾಡಲು ಯತ್ನಿಸಿದ್ದಾಗ ಚಿಕ್ಕಮಗಳೂರು ಆರ್‌ಎಫ್‌ಓ ಶಿಲ್ಪಾ ದಾಳಿ ಮಾಡಿ ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆ ಶಹಪುರ ಮೂಲದ ರಾಮು ಹಾಗೂ ವೆಂಕಟೇಶ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹತ್ತಾರು ಉಡದ ಗುಪ್ತಾಂಗ ಭಾಗ, ಮೂರು ಚಿಪ್ಪು ಹಂದಿ ಬಿಡಿ ಭಾಗವನ್ನ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಡ ಪ್ರಾಣಿಯ ಗುಪ್ತಾಂಗ ಭಾಗಕ್ಕೆ ಮಾರುಕಟ್ಟೆ ಭಾರೀ ಬೇಡಿಕೆಯಿದ್ದು ಮಾಟ, ಮಂತ್ರ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ಈ ಭಾಗಗಳನ್ನ ಬಳಸುತ್ತಾರೆ. ಈ ಸಂಬಂಧ ಚಿಕ್ಕಮಗಳೂರು ವಲಯದಲ್ಲಿ ಪ್ರಕರಣ ದಾಖಲಾಗಿದೆ.