ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ಇದರ ಆಶ್ರಯದಲ್ಲಿ ಸಾಹಿತ್ಯ ಸೌರಭ ಪುಸ್ತಕ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತ್ತು, ಈ ವೇಳೆ ಹೊಸ ಕೃತಿಗಳನ್ನು ಅನಾವರಣಗೊಳಿಸಲಾಯಿತು.
ಪುಸ್ತಕ ಹಬ್ಬವು ನಿನ್ನೆಯಿಂದ ಆರಂಭಗೊಂಡು ಡಿ.16 ರ ವರೆಗೆ ಪುತ್ತೂರಿನ ಟೌನ್ ಕೋ. ಬ್ಯಾಂಕ್ ಸಂಭಾಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಕನ್ನಡ ಪೆರಾಜೆ ಶಾಲೆಯ ಮುಖ್ಯ ಶಿಕ್ಷಕ ಕೇಶವ ಪೆರಾಜೆ ಉದ್ಘಾಟಿಸಿ ಮಾತನಾಡಿದರು.
ನನಗೆ ಸಾಹಿತ್ಯದ ಬಗ್ಗೆ ಗೊತ್ತಿಲ್ಲ. ನಾನು ಕೃತಿಕಾರನಲ್ಲ ಅದರೂ ಪುಸ್ತಕದ ಬಗ್ಗೆ ಅಪಾರವಾದ ಗೌರವವಿದೆ. ಪುಸ್ತಕಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕಮ್ಮಿ ಆಗಿಲ್ಲ ಬದಲಿಗೆ ಬರವಣಿಗೆಕಾರರ ಸಂಖ್ಯೆ ಕುಗ್ಗಿ ಹೋಗಿದೆ ಎಂದರು.
ಬಳಿಕ ಪ್ರೋ ಬಿ.ವಿ ಅರ್ತಿಕಜೆ ಅವರ ನ್ಯಾಯಮಂಜರಿ ಮತ್ತು ಶಂಕರಿ ಶರ್ಮ ಬರೆದ ಭಾವ ಬಿಂದು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹೊಸದಿಂಗತ ಪತ್ರಿಕೆಯ ಸಂಪಾದಕ ಪ್ರಕಾಶ್ ಭಟ್ ಇಳಂತಿಲ ಪುಸ್ತಕ ಬಿಡುಗಡೆ ಮಾಡುವ ಅವಕಾಶ ನನಗೆ ದೊರೆತ್ತದ್ದು ನನ್ನ ಅದೃಷ್ಟ. ಅರ್ತಿಕಜೆಯವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ಹಿಂದೆ ಅವರ ಕೃತಿಗಳು ವೃತ್ತಾಂತದಲ್ಲಿ ಪ್ರಕಟವಾದಗ ಅನೇಕ ಜನರು ಓದುಗರು ಅವರ ಲೇಖನಕ್ಕಾಗಿ ಕಾಯುತ್ತಿದ್ದರು ಎಂದರು.
ಈ ವೇಳೆ ಕ.ಸಾ.ಪ ಅಧ್ಯಕ್ಷ ಐತ್ತಪ್ಪ ನಾಯ್ಕ್, ವಿವೇಕಾನಂದ ಕಾಲೇಜಿನ ಪ್ರದ್ಯಾಪಕ ಶ್ರೀಶ ಕುಮಾರ ಯಂ.ಕೆ, ಮತ್ತಿತ್ತರರು ಉಪಸ್ಥಿತರಿದ್ದರು.