Friday, September 20, 2024
ಸುದ್ದಿ

ಸಪ್ತಪದಿ ತುಳಿದ ಭಾರತದ ಸ್ಟಾರ್ ಆಟಗಾರ್ತಿ ಸೈನ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ – ಕಹಳೆ ನ್ಯೂಸ್

ಭಾರತದ ಸ್ಟಾರ್ ಆಟಗಾರ್ತಿ ಸೈನ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಇಬ್ಬರು ಸಪ್ತಪದಿ ತುಳಿದ ಸಂಭ್ರಮದಲ್ಲಿದ್ದಾರೆ. ಹೌದು ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಗುಪ್ತ್ ಗುಪ್ತ್ ಆಗಿ ಡೇಟಿಂಗ್ ನಡೆಸ್ತಾ ಇದ್ದ ಸೈನಾ ಹಾಗೂ ಕಶ್ಯಪ್ ಇದೀಗ ಸುಂದರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಬ್ಬರ ಮೊದಲ ಭೇಟಿ ಆಗಿದ್ದು ಹೈದರಾಬಾದಿನ ಗೋಪಿ ಚಂದ್ ಬಾಡ್ಮಿಂಟನ್ ಅಕಾಡೆಮಿಯಲ್ಲಿ . ಆ ಮೊದಲ ನೋಟದಲ್ಲೇ ಇಬ್ಬರ ನಡುವೆ ಪ್ರೀತಿ ಚಿಗುರೊಡಿದಿತ್ತು.ಇಬ್ಬರೂ ಕೂಡ ಕ್ರೀಡಾ ಲೋಕದ ದಿಗ್ಗಜರೆ. ಇಬ್ಬರ ಆಸೆ, ಆಕಾಂಕ್ಷೆ, ಗುರಿ ಎಲ್ಲವೂ ಒಂದೆ.ಮೇಡ್ ಫಾರ್ ಈಚ್ ಅದರ್ ಅಂತಾರಲ್ಲ ಅದು ಸೈನಾ ಹಾಗೂ ಕಶ್ಯಪ್ ವಿಷ್ಯದಲ್ಲಿ ಒಂದೆ ಆಗಿದೆ ಅಂದ್ರೆ ತಪ್ಪಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

28 ವರ್ಷದ ಸೈನಾ ಯಾವಾಗ ಮದುವೆ ಊಟ ಹಾಕ್ತಾರೆ ಅಂತ ಅಭಿಮಾನಿಗಳು ಕಾಯ್ತಾನೇ ಇದ್ರು. ಆದ್ರೆ ಸೈನಾ ಹಾಗೂ ಕಶ್ಯಪ್ ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ರಿಜಸ್ಟರ್ ಮ್ಯಾರೇಜ್ ಆಗೋ ಮೂಲಕ ಅಭಿಮಾನಿಗಳಿಗೆ ಸರ್ ಪ್ರೈಸ್‌ಕೊಟ್ರು.

ಇನ್ನೂ ಹೈದರಾಬಾದಿನಲ್ಲಿ ನಡೆಯೋ ಗ್ರಾ್ಯಂಡ್ ರಿಸೆಪ್ಷನ್‌ಗೆ ಸಿನೆಮಾ ಲೋಕದ ಸ್ಟಾರ್‌ಗಳನ್ನ ಜೊತೆಗೆ ಕ್ರೀಡಾಲೋಕದ ನಾಯಕರನ್ನ ಆಹ್ವಾನಿಸಲಾಗಿದೆ. ಒಟ್ನಲ್ಲಿ ಭಾರತೀಯ ಬಾಡ್ಮೀಂಟನ್ ಕ್ರೀಡಾ ಜಗತ್ತಲ್ಲಿ ಮಿಂಚಿ ಭಾರತ ದೇಶದ ಹೆಸರನ್ನ ಸಾಗರದಾಚೆಗೂ ಪಸರಿಸಿದ ಈ ಕ್ಯೂಟ್ ಜೋಡಿಗೆ ನಮ್ಮ ಕಡೆಯಿಂದ ಹ್ಯಾಪಿ ಮ್ಯಾರೀಡ್ ಲೈಫ್.

ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್