ಜನವರಿಯಲ್ಲಿ ಹಂಪಿ ಉತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಪ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಶುಕ್ರವಾರ ಹೇಳಿದ್ದಾರೆ.ಮೂರು ದಿನಗಳ ಹಂಪಿ ಉತ್ಸವವನ್ನು 2ದಿನಕ್ಕೆ ನಿಗದಿ ಪಡಿಸಲಾಗಿದೆ.
ಡಿಸೆಂಬರ್ 5 ರಂದು ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಜನವರಿ 12 ಮತ್ತು 13 ರಂದು ಉತ್ಸವ ನಡೆಯುವ ಸಾಧ್ಯತೆಯಿದೆ. ಸುಮಾರು ಎಂಟೂವರೆ ಕೋಟಿ ರು ಪ್ರಸ್ತಾವನೆ ಕಳುಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ದಿನಾಂಕ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ. ಕೇವಲ 4 ವೇದಿಕೆ ಮಾತ್ರ ಸಿದ್ಧಪಡಿಸಲಾಗುತ್ತದೆ.
ವಿರೂಪಾಕ್ಷ ದೇವಾಲಯ, ಎದಿರು ಬಸವಣ್ಣ ದೇವಾಲಯ, ಕಡಲೆಕಾಳು ಗಣೇಶ ಮತ್ತು ಸಾಸಿವೆಕಾಳು ಗಣೇಶ ದೇವಾಲಯಗಳ ಆವರಣದಲ್ಲಿ ವೇದಿಕೆ ಹಾಕಲಾಗಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.