ಮಧ್ಯಪ್ರದೇಶ ತೆಲಂಗಾಣದ ಅಸೆಂಬ್ಲಿಯಲ್ಲಿಯೂ ಇದ್ದಾರೆ ಕ್ರಿಮಿನಲ್ಸ್: ಬಹಿರಂಗಪಡಿಸಿದ ಎಡಿಆರ್ – ಕಹಳೆ ನ್ಯೂಸ್
ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ ೧೮೭ ಮಂದಿ ಕೋಟ್ಯಾಧೀಶರಿದ್ದು, ೯೪ ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ಎಡಿಆರ್-ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆ ಬಹಿರಂಗಪಡಿಸಿದೆ.
ಬಿಜೆಪಿಯ ೯೧ ಹಾಗೂ ಕಾಂಗ್ರೆಸ್ ೯೦, ಬಿಎಸ್ಪಿ ಹಾಗೂ ಎಸ್ಪಿಯಿಂದ ತಲಾ ೧ ಹಾಗೂ ನಾಲ್ಕು ಪಕ್ಷೇತರ ಅಭ್ಯರ್ಥಿಗಳು ೧ ಕೋಟಿಗೂ ಹೆಚ್ಚಿನ ಮೊತ್ತದ ಆಸ್ತಿ ಘೋಷಿಸಿ ಮಾಡಿಕೊಂಡಿದ್ರು.
೨೩೦ ಸದಸ್ಯ ಬಲದ ಅಸೆಂಬ್ಲಿಯಲ್ಲಿ ೯೪ ಶಾಸಕರ ಮೇಲೆ ಕ್ರಿಮಿನಲ್ ಕೇಸ್‌ಗಳಿವೆ. ೪೭ ಶಾಸಕರ ಮೇಲೆ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯದಂತಹ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.
ಇನ್ನು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತಗೊಂಡ ೧೧೯ ಶಾಸಕರಲ್ಲಿ ೭೩ಕ್ಕೂ ಹೆಚ್ಚು ಶಾಸಕರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ.
೪೭ ಶಾಸಕರ ಮೇಲೆ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ ಪ್ರಕಾರದ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.