ಮಂಗಳೂರು: ಮಂಗಳೂರಿನ ತಣ್ಣೀರು ಬಾವಿಯ ಸಮೀಪ ಕೆಲ ತಿಂಗಳ ಹಿಂದೆ ಶಿವರಾಜ್ ಎನ್ನುವ ವ್ಯಕ್ತಿಯ ಕೊಲೆಯಾಗಿತ್ತು. ಸ್ಲಾಪ್‌ನಲ್ಲಿ ಮಲಗಿಕೊಂಡಿದ್ದ ಸಮಯದಲ್ಲಿ ದುರ್ಷ್ಕಮಿಗಳು ಮಾರಕಸ್ತ್ರಗಳಿಂದ ಕಡಿದು ಕೊಲೆಮಾಡಿದರು.
ಇವರ ಕುಟುಂಬದವರು ತೀರಾ ಬಡವರಾಗಿದ್ದು ಪರಿಹಾರ ಧನಕ್ಕಾಗಿ ಒತ್ತಾಯಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯಮಂತ್ರಿ ನಿಧಿಯಿಂದ ಕುಟುಂಬದವರಿಗೆ ಎರಡು ಲಕ್ಷದ ಚೆಕ್ಕನ್ನು ಪರಿಹಾರಾರ್ಥವಾಗಿ ನೀಡಿದರು. ಈ ಸಂದರ್ಭದಲ್ಲಿ ಶಿವರಾಜನ ತಾಯಿ ಮಗನನ್ನು ಕಳೆದ ದುಖಃದಲ್ಲಿ ಭಾವುಕರಾದರು.