Tuesday, January 21, 2025
ಸುದ್ದಿ

ಶ್ರೀದೇವಿ ಭಜನಾ ಮಂದಿರದ ವರ್ಧಂತ್ಯುತ್ಸವ ಸಹಾಯರ್ಥ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ದೇವಿ ಭಜನಾ ಮಂದಿರ, ಬೊಳ್ಳುಕಲ್ಲು ಪೆರಾಜೆ, ಸತ್ಯಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಬುಡೋಳಿ ಇದರ ಜಂಟಿ ಆಶ್ರಯದಲ್ಲಿ ಶ್ರೀದೇವಿ ಭಜನಾ ಮಂದಿರದ ವರ್ಧಂತ್ಯುತ್ಸವದ ಸಹಾಯರ್ಥವಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟ ಅಡ್ಲಬೆಟ್ಟು ಕ್ರೀಡಾಂಗಣದಲ್ಲಿ ಅದಿತ್ಯವಾರ ನಡೆಯಿತು.

ಈ ಪಂದ್ಯಾಟದ ಉದ್ಘಾಟನೆಯನ್ನು ಪೆರಾಜೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ! ಶ್ರೀ ನಾಥ್ ಅಳ್ವ ಪೆರಾಜೆ ಗುತ್ತು ನೆರವೇರಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶ್ರೀ ದೇವಿ ಟ್ರಸ್ಟ್ ನ ಅಧ್ಯಕ್ಷ ಮಾದವ ಪಾಳ್ಯ, ಶ್ರೀ ದೇವಿ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ್ ಎಸ್.ಪಿ, ಪ್ರಮುಖರಾದ ಡಾ! ಅನೂಷ್ ನ್ಯಾಕ್, ಸತ್ಯ ಶ್ರೀ ಗೆಳೆಯ ರ ಬಳಗ ಅಧ್ಯಕ್ಷ ದಿನಕರ ಪೂಜಾರಿ, ಶ್ರೀ ದೇವಿ ಭಜನಾ ಮಂಡಳಿ ಅಧ್ಯಕ್ಷ ಯತಿರಾಜ್ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು