Monday, January 20, 2025
ರಾಜಕೀಯಸುದ್ದಿ

ರೈತರ ಸಂಕಷ್ಟಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದು, ಕರ್ನಾಟಕದಲ್ಲಿ ಕೇವಲ ಒಂದು ಸಾವಿರ ಮಂದಿಯ ಸಾಲ ಮನ್ನಾ ಮಾಡಲಾಗಿದೆಯಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ತವರು ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಇದೇ ಮೊದಲ ಬಾರಿಗೆ ಸಾರ‍್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸಂಪರ‍್ಣವಾಗಿ ಗಾಂಧಿ ಕುಟುಂಬದ ವಿರುದ್ಧ ವಾಗ್ಧಾಳಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ರೈತರ ಸಂಕಷ್ಟಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. 10 ವರ್ಷಗಳ ಕಾಲ ಆಡಳಿತದಲ್ಲಿದ್ದರೂ ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಲಿಲ್ಲವೇಕೆ” ಎಂದೂ ಅವರು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೈತರ ಅಭಿವೃದ್ಧಿ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳುವುದೆಲ್ಲಾ ಸುಳ್ಳು. ಕರ್ನಾಟಕದ ಸರ್ಕಾರದಲ್ಲಿ ಸಹಭಾಗಿಯಾಗಿರುವ ಕಾಂಗ್ರೆಸ್ನವರು ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಆದರೆ, ಅಲ್ಲಿ ಸರ್ಕಾರ ಬಂದು ಆರು ತಿಂಗಳಾದರೂ, ಕೇವಲ 10,000 ರೈತರ ಸಾಲಮನ್ನಾ ಆಗಿರುವುದನ್ನು 4 ದಿನಗಳ ಹಿಂದೆ ಪತ್ರಿಕೆಯ ವರದಿ ಮೂಲಕ ತಿಳಿದುಕೊಂಡೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ರೈತರಿಗೆ ಬಂಧನದ ವಾರಂಟ್ ನೀಡಲಾಗುತ್ತಿದೆ” ಎಂದೂ ಟೀಕಿಸಿದರು.