Recent Posts

Friday, November 22, 2024
ಕ್ರೀಡೆಸುದ್ದಿ

ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು – ಕಹಳೆ ನ್ಯೂಸ್

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಫೈನಲ್ ಸೋಲಿನ ಕಂಟಕ’ದಿಂದ ಮುಕ್ತರಾಗಿದ್ದಾರೆ. ಸ್ರ‍್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ.

ಗ್ವಾಂಗ್ಝೂನಲ್ಲಿ ನಡೆದ ವರ್ಷ ವರ್ಷಾಂತ್ಯದ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್‌ಶಿಪ್ ಗೆದ್ದು ದೇಶದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ಬರೆದಿದ್ದಾರೆ. ಇದು ಭಾರತಕ್ಕೆ ಒಲಿದ ಮೊತ್ತಮೊದಲ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಎಂಬುದು ಖುಷಿಯನ್ನು ಇಮ್ಮಡಿಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರವಿವಾರ ನಡೆದ ವನಿತಾ ಸಿಂಗಲ್ಸ್ ಫೈನಲ್ನಲ್ಲಿ 2017 ರ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ ಒಕುಹಾರ ಅವರನ್ನು ಸಿಂಧು 21-19, 21-17 ನೇರ ಗೇಮ್ಗಳಿಂದ ಸೋಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಈ ವರ್ಷ ಸಿಂಧು ಅವರಿಗೆ ಒಲಿದ ಮೊದಲ ಪ್ರಶಸ್ತಿಯಾಗಿದೆ. 2018 ರ ಋತುವಿನುದ್ದಕ್ಕೂ ಪ್ರಶಸ್ತಿ ಬರಗಾಲದಲ್ಲಿದ್ದ ಹೈದರಾಬಾದಿ ಆಟಗಾರ್ತಿ, ವರ್ಷದ ಕೊನೆಯ ಕೂಟದಲ್ಲಿ ಬಂಗಾರವನ್ನು ಬೇಟೆಯಾಡುವ ಮೂಲಕ ಅಮೋಘ ಸಾಧನೆಗೈದರು.

ಸಾಮಾನ್ಯವಾಗಿ ಇತ್ತೀಚಿನ ಕೂಟಗಳ ಫೈನಲ್ ತನಕ ಬಂದು ಪ್ರಶಸ್ತಿಯನ್ನು ಕೈಚೆಲ್ಲುತ್ತಿದ್ದ ಸಿಂಧು ಈ ಬಾರಿ ಎಚ್ಚರಿಕೆಯ ಆಟವಾಡಿದರು. ಹಿಂದಿನ ತಪ್ಪು ಮರುಕಳಿಸಬಾರದು ಎಂಬ ದೃಢ ಸಂಕಲ್ಪದಿಂದ ಆಡಿದ್ದು ಸ್ಪಷ್ಟವಾಗಿತ್ತು. ಇದರಲ್ಲಿ ಧಾರಾಳ ಯಶಸ್ಸು ಕಂಡರು.