ಬದಲಾವಣೆ ತರಲು ಅಧಿಕಾರಕ್ಕೆ ಬಂದಿದ್ದೇವೆ ಹೊರತು, ಕುರ್ಚಿಯ ತೀಟೆಗಾಗಿ ಅಧಿಕಾರಕ್ಕೆ ಬಂದಿಲ್ಲ: ಅನಂತಕುಮಾರ ಹೆಗಡೆ – ಕಹಳೆ ನ್ಯೂಸ್
ಹುಬ್ಬಳ್ಳಿ: ದೇಶದಲ್ಲಿ ಬದಲಾವಣೆ ತರಬೇಕು. ಅಂತಾ ನಾವು ಅಧಿಕಾರಕ್ಕೆ ಬಂದಿದ್ದೇವೆ. ಹೊರತು ಕೇವಲ ಕುರ್ಚಿಯ ತೀಟೆಗಾಗಿ ನಾವು ಅಧಿಕಾರಕ್ಕೆ ಬಂದಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಅವರು ನಿನ್ನೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ದೇಶಪಾಂಡೆ ಪ್ರತಿಷ್ಠಾನ ಹಾಗೂ ಲಘು ಉದ್ಯೋಗ ಭಾರತಿಯಿಂದ ಮೇಕ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಮಾತನಾಡಿದರು.
ದೇಶದ ಸಮಗ್ರ ಬದಲಾವಣೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಈ ಹಿಂದೆ ನಮ್ಮನ್ನು ವಿರೋಧ ಮಾಡಿದ್ರೆ ನಾವು ನಿಮ್ಮನ್ನು ಮೆಟ್ಟಿ ಹೋಗುತ್ತೇವೆ ಎಂಬ ವಾತವರಣ ಇತ್ತು. ಆದರೆ ಈಗ ಹಾಗಿಲ್ಲ ಎಂದ ಅವರು ನೀವು ಬರದಿದ್ದರೂ ನಿಮ್ಮನ್ನು ಹೊತ್ತುಕೊಂಡು ಹೋಗ್ತಿವಿ ಅಂತಿದ್ದಾರೆ ಪ್ರಧಾನಿ ಮೋದಿ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರನ್ನೂ ಒಳಗೊಳ್ಳಬೇಕಿದೆ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ವಿರೋಧಿಸುವವರಿಗೆ ಸೂಕ್ಷ್ಮವಾಗಿ ಟಾಂಗ್ ನೀಡಿದ ಅನಂತಕುಮಾರ ಹೆಗಡೆ ಅವರು ಮೇಕ್ ಇನ್ ಇಂಡಿಯಾದಿಂದ ದೇಶದ 120 ಕೋಟಿ ಜನತೆಗೆ ಉದ್ಯೋಗ ಒದಗಿಸುವ ಯೋಚನೆ ಮಾಡಬೇಕು ಎಂದು ಕರೆ ನೀಡಿದರು.