Friday, November 15, 2024
ಸುದ್ದಿ

“ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಜೀಪ ಮೂಡ ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ” ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ ಸಜೀಪ ಮೂಡ ಬ್ರಹ್ಮ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಾಡ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಮಾತನಾಡಿ ಆಯುಷ್ಯ ವನ್ನು ಹೆಚ್ಚು ಮಾಡಲು ಸರಕಾರದ ಬಹು ಉಪಯುಕ್ತ ಮಾಹಿತಿ ಯನ್ನು ನೀಡುವ ಕಾರ್ಯಕ್ರಮ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಹೆಣ್ಣು ಮಕ್ಕಳನ್ನು ರಕ್ಷಣೆ ಗಾಗಿ ವಿಶೇಷ ಮುತುವರ್ಜಿಯಿಂದ ಕೇಂದ್ರ ಸರಕಾರ ಯೋಜನೆ ಗಳನ್ನು ಕಾರ್ಯರೂಪಕ್ಕ ತಂದಿದೆ. ಇಂತಹ ಕಾರ್ಯ ಕ್ರಮದ ಅರಿವನ್ನು ಪ್ರತಿಯೊಬ್ಬರಿಗೆ ತಲುಪಿಸಲು ಕಾರ್ಯಕ್ರಮ ಸರಕಾರ ಆಯೋಜಿಸಿದೆ, ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಜನಸಂಪರ್ಕ ಕಾರ್ಯಾಲಯದ ಜಿಲ್ಲಾ ಸಂಪರ್ಕಾಧಿಕಾರಿ ಜಗನ್ನಾಥ, ಗ್ರಾ.ಪಂ.ಸದಸ್ಯ ರು ಗಳಾದ ಯಮುನಾ, ಸರಸ್ವತಿ, ಹರಿಣಾಕ್ಷೀ, ಹೇಮಾವತಿ, ಸಮೀಮಾ, ಸೀತಾರಾಮ, ಬಂಟ್ವಾಳ ಸಿ.ಡಿ.ಪಿ.ಒ. ಮಲ್ಲಿಕಾ, ಕ್ಷೇತ್ರ ಪ್ರಚಾರ ಅಧಿಕಾರಿ ತುಕರಾಮ ಗೌಡ, ಹಿರಿಯ ಮೇಲ್ಬಿಚಾರಕಿ ಭಾರತಿ, ಮೇಲ್ವಿಚಾರಕಿಯರಾದ ಸವಿತಾ, ಸಿಂಧು ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ನವೀನ್ ಉಪಸ್ಥಿತರಿದ್ದರು. ‌

ಕಾರ್ಯಕ್ರಮದ ಆರಂಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸುಭಾಷ್ ನಗರ ದಿಂದ ಕಲ್ಯಾಣ ಮಂಟಪ ದವರೆಗೆ ಮಹಿಳೆಯರು ಮೆರವಣಿಗೆಯ ಮೂಲಕ ಸಾಗಿಬಂದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ದ ಪ್ರಚಾರ ಅಧಿಕಾರಿ ತುಕರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿ ದರು.‌
ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ರೋಹಿತ್ ಸ್ವಾಗತಿಸಿದರು. ಮೇಲ್ಬಿಚಾರಕಿ ಸವಿತಾ ವಂದಿಸಿದರು. ಹಿರಿಯ ಮೇಲ್ಬಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.