Monday, January 20, 2025
ಸುದ್ದಿ

ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಲೀಕ್‌: ಮೂವರು ಕಾರ್ಮಿಕರು ದಾರುಣ ಸಾವು – ಕಹಳೆ ನ್ಯೂಸ್

ಕೋರ್ಬಾ : ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯಲ್ಲಿನ ಸೌತ್‌ ಈಸ್ಟರ್ನ್ ಕೋಲ್‌ ಫೀಲ್ಡ್‌ ಲಿಮಿಟೆಡ್‌ (ಎಸ್‌ಇಸಿಎಲ್‌) ನ ಭೂಗತ ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಲೀಕ್‌ ಸಂಭವಿಸಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಕೋಲ್‌ ಇಂಡಿಯಾ ಕಂಪೆನಿಯ ಸಹ ಸಂಸ್ಥೆಯಾಗಿರುವ ಎಸ್‌ಇಸಿಎಲ್‌ನ ಬಾಗ್‌ದೇವಾ ಕೋಲ್‌ ಮೈನ್ಸ್‌ನಲ್ಲಿ ಈ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಬಗ್ಗೆ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಛತ್ತೀಸ್‌ಗಢದ ನಿಯೋಜಿತ ಮುಖ್ಯಮಂತ್ರಿ ಭೂಪೇಶ್‌ ಭಾಗೇಲ್‌ ಅವರು ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದು ಮೃತಪಟ್ಟಿರುವ ಮೂವರು ಕಾರ್ಮಿಕರ ಕುಟುಂಬಕ್ಕೆ ತಲಾ 75,000 ರೂ. ಪರಿಹಾರ ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು