ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಮೋಸ ಹಾಗೂ ಕಾರ್ಡ್ ಕ್ಲೋನಿಂಗ್ ದೇಶದ ಅನೇಕ ಎಟಿಎಂ ಬಳಕೆದಾರರಿಗೆ ತಲೆನೋವುಂಟು ಮಾಡಿದೆ.
ಈಗಾಗಲೇ ಸೂಕ್ತ ಕ್ರಮಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಎಲ್ಲ ಬ್ಯಾಂಕ್ ಗಳಿಗೂ ಎಟಿಎಂಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸುವಂತೆ ಸೂಚನೆ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದೆ. ಎಟಿಎಂಗಳಿಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸಿ ಮೋಸ ತಡೆಯಲು ಮುಂದಾಗಿದೆ.
ಮಾರ್ಚ್, 2019 ರೊಳಗೆ ಎಲ್ಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಮಷಿನ್ ಗಳಿಗೂ ಆಂಟಿ ಸ್ಕಿಮ್ಮಿಂಗ್ ಅಳವಡಿಕೆಯಾಗಲಿದೆ.
2017ರ ನಂತ್ರ ಬಂದ ಎಟಿಎಂ ಮಷಿನ್ ಗಳಲ್ಲಿ ಆಂಟಿ ಸ್ಕಿಮ್ಮಿಂಗ್ ವ್ಯವಸ್ಥೆಯಿದೆ. ಆದ್ರೆ ಅದಕ್ಕಿಂತ ಮೊದಲು ಬಂದ ಮಷಿನ್ ನಲ್ಲಿ ಈ ವ್ಯವಸ್ಥೆಯಿಲ್ಲ.
ದೇಶದಾದ್ಯಂತ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 9,500 ಎಟಿಎಂ ಮಷಿನ್ ಗಳಿವೆ.ಬ್ಯಾಂಕ್ ಮುಂದಿನ ವರ್ಷ ಎಟಿಎಂ ಕಾರ್ಡ್ ದಾರರಿಗೆ ಹೆಚ್ಚಿನ ಭದ್ರತೆ ನೀಡಲಿದೆ.
ಆದ್ರೆ ಗ್ರಾಹಕರು ಕೂಡ ಕೆಲವೊಂದು ನಿಯಮಗಳನ್ನು ಪಾಲಿಸಿ, ಬ್ಯಾಂಕ್ ಗೆ ನೆರವಾಗಬೇಕೆಂದು ಮೂಲಗಳು ಹೇಳಿವೆ.