Friday, September 20, 2024
ಸುದ್ದಿ

ಕುಡಿಯೋಕೆ ನೀರಿಲ್ಲದೆ ಹಸು ಪರದಾಟ: ಸ್ವತಃ ನೆಲ್ಲಿ ಆನ್ ಮಾಡಿ ನೀರು ಕುಡಿದ ಹಸು – ಕಹಳೆ ನ್ಯೂಸ್

ಚಿಕ್ಕಮಗಳೂರು: ಕುಡಿಯೋಕೆ ನೀರಿಲ್ಲದೆ ಹಸುವೊಂದು ಪರದಾಡಿ, ರಸ್ತೆಯ ಪಕ್ಕದಲ್ಲಿದ್ದ ನೆಲ್ಲಿಯಲ್ಲಿ ನೀರು ಕುಡಿದಿರೋ ಮನಕಲಕುವ ಘಟನೆವೊಂದು ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ನಡೆದಿದೆ.

ಕುಡಿಯೋಕೆ ನೀರಿಲ್ಲದೆ ಹಸುವೊಂದು ಕೆಲಕಾಲ ಪರದಾಡಿ, ರಸ್ತೆಯ ಪಕ್ಕದಲ್ಲಿದ್ದ ನೆಲ್ಲಿಯಲ್ಲಿ ಸ್ವತಃ ಹಸುವೇ ನೆಲ್ಲಿಯನ್ನ ಆನ್ ಮಾಡಿಕೊಂಡು ಸುಮಾರು ಐದು ನಿಮಿಷ ನೀರು ಕುಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಿಗದೆ ಕಾರಣ ಕುಡಿಯ ನೀರಿಗಾಗಿ ಪರದಾಡಿದ ಹಸು ಕೊನೆಗೆ ನೆಲ್ಲಿನಲ್ಲಿ ನೀರು ಕುಡಿದಿದೆ. ಇದನ್ನ ಕಂಡ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ.

ಜಾಹೀರಾತು