Friday, September 20, 2024
ಸುದ್ದಿ

ಉಜ್ವಲ ಯೋಜನೆಯನ್ನು ಎಲ್ಲ ಬಡವರಿಗೂ ವಿಸ್ತರಿಸಲು ಕೇಂದ್ರ ಅಸ್ತು – ಕಹಳೆ ನ್ಯೂಸ್

ದೆಹಲಿ: ದೇಶದ ಬಡ ಜನತೆಗೆ ಕೇಂದ್ರ ಸರ್ಕಾರ ಬಂಪರ್ ಸುದ್ದಿಯೊಂದನ್ನು ನೀಡಿದೆ. ಈವರೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗಷ್ಟೇ ಲಭ್ಯವಿದ್ದ ‘ಉಜ್ವಲ’ ಯೋಜನೆಯನ್ನು ಎಲ್ಲ ಬಡವರಿಗೂ ವಿಸ್ತರಿಸಲಾಗಿದೆ.

ಉಜ್ವಲ ಯೋಜನೆಯಡಿ ಬಡ ಜನತೆಗೆ ಉಚಿತ ಅಡುಗೆ ಅನಿಲ ಲಭ್ಯವಾಗುತ್ತಿದ್ದು, ಯೋಜನೆಯನ್ನು ಎಲ್ಲ ಬಡವರಿಗೂ ವಿಸ್ತರಿಸಲು ನಿರ್ಧರಿಸಿರುವ ಕಾರಣ ದೇಶದ ಶೇಕಡ ನೂರರಷ್ಟು ಜನತೆಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅರ್ಹ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಎಲ್ ಪಿ ಜಿ ಸಂಪರ್ಕವನ್ನು ಕಲ್ಪಿಸಲು ವಿತರಕರಿಗೆ ಕೇಂದ್ರ ಸರ್ಕಾರ 1,600 ರೂಪಾಯಿ ಸಬ್ಸಿಡಿ ನೀಡುತ್ತದೆ.

ಎಲ್ಲ ಬಡವರಿಗೂ ಯೋಜನೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.