Recent Posts

Sunday, January 19, 2025
ಸುದ್ದಿ

ಅಕ್ರಮ ಕಲ್ಲು ಗಣಿಗಾರಿಕೆ, ಪೊಲೀಸರ ದಾಳಿ: ಸ್ಫೋಟಕ ವಸ್ತುಗಳ ವಶ – ಕಹಳೆ ನ್ಯೂಸ್

ಚಿಕ್ಕಮಗಳೂರು: ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕಲ್ಲು ಕೋರೆ ಮೇಲೆ ಪೊಲೀಸರು ದಾಳಿ ಮಾಡಿ 2 ಲಕ್ಷ 90 ಸಾವಿರ ರೂ ಮೌಲ್ಯದ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ಸ್ಫೋಟಕ ವಸ್ತುಗಳನ್ನ ಪೊಲೀಸರು ವಶ ಪಡಿಸಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೆಚ್.ತಿಮ್ಮಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.

ಹೆಚ್.ತಿಮ್ಮಾಪುರ ಗ್ರಾಮದ ಸರ್ವೆ ನಂಬರ್ 26 ರಲ್ಲಿ ಭದ್ರಾವತಿ ಮೂಲದ ಅರುಣ್ ಕುಮಾರ್ ಎಂಬುವರು ಪರವಾನಗಿ ಪಡೆಯದೆ ಅಕ್ರಮವಾಗಿ ಗಲ್ಲು ಗಣಿಗಾರಿಕೆ ನಡೆಸುತ್ತಿದ್ರು, ಅಲ್ದೆ ಸ್ಫೋಟಕ ವಸ್ತುಗಳನ್ನ ಬಳಸಿ ಕಲ್ಲು ಕೋರೆಯನ್ನ ನಡೆಸುತ್ತಿದ್ರು,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖಚಿತ ಮಾಹಿತಿ ಮೇರೆಗೆ ತರೀಕೆರೆ ಇನ್ಸ್‌ಪೆಕ್ಟರ್ ಜಯಂತ್ ಎಲ್ ಗೌಳಿ ಕಲ್ಲು ಕೋರೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಪೋಲೀಸರನ್ನು ಕಂಡ ಮಾಲೀಕ ಅರುಣ್ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳದಲ್ಲಿದ್ದ 2 ಲಕ್ಷ 90 ಸಾವಿರ ರೂ ಮೌಲ್ಯದ ಸ್ಫೋಟಕ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.