ದೇಶದ 35 ನೇ ಸಂವಹನ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಡಿ. 19 ರಂದು ಜಿಸ್ಯಾಟ್ 7ಎ ಅನ್ನು ಉಡಾವಣೆ ಮಾಡಲಾಗುತ್ತಿದೆ.
ಜಿಎಸ್‌ಎಲ್‌ವಿ ಎಫ್ 11 ರಾಕೆಟ್ ಬಳಸಿ ಮಾಡುವ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಆಯುಷ್ಯ ಎಂಟು ವರ್ಷಗಳಾಗಿದ್ದು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಉಡಾವಣೆ ಮಾಡಲಾಗುತ್ತದೆ.
ಇದು ಸೇನೆಯ ಸಂವಹನಕ್ಕೆ ನೆರವು ನೀಡಲಿದ್ದು, ಡ್ರೋನ್‌ಗಳ ನಿಯಂತ್ರಣಕ್ಕೂ ಮಹತ್ವದ್ದಾಗಿರಲಿದೆ.