ಇಂದು ಬಿಜೆಪಿ ರಾಜ್ಯ ಕಛೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರರಾದ ಶ್ರೀ ಸಂಬಿತ್ ಪಾತ್ರ ರವರು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಮಾಧ್ಯಮ ವಕ್ತಾರರಾದ ಶ್ರೀ ಪ್ರಕಾಶ್, ಶ್ರೀ ಅಶ್ವಥ್ ನಾರಾಯಣ್, ಶ್ರೀ ವಾಮನಾಚಾರ್ಯ, ಶ್ರೀಮತಿ ಮಾಳವಿಕಾ ಅವಿನಾಶ್ ಹಾಗೂ ಇತರ ನಾಯಕರುಗಳು ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ರಫೆಲ್ ವಿಷಯಕ್ಕೆ ಸಂಬಂಧಿಸಿ ಸುಳ್ಳು ಹೇಳುತ್ತಿದ್ದರು. ಈಗ ಸುಪ್ರೀಂ ಕೋರ್ಟು ಸತ್ಯಾಂಶವನ್ನು ಪ್ರಕಟಿಸಿದೆ. ರಾಹುಲ್ ಸುಳ್ಳು ಹೇಳಿಕೆಗೆ ದೇಶದ 70 ಕಡೆಗಳಲ್ಲಿ ಸುದ್ದಿಗೋಷ್ಟಿಯನ್ನು ಮಾಡಲಾಗುವುದು ಎಂದರು.