ಮಂಗಳೂರು: ರಫೇಲ್ ಡೀಲ್ ವಿಚಾರಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ಪಿಆರ್‍ಓ, ಮಾಜಿ ಸಚಿವ ಪಲ್ಲಂ ರಾಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಜಂಟಿ ಸದನ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಬೇಕು, ಜೊತೆಗೆ ರಫೇಲ್ ಒಪ್ಪಂದದಲ್ಲಿ ಕೇಂದ್ರ ಪಾರದರ್ಶಕತೆ ತೋರುತ್ತಿಲ್ಲ,
ಇನ್ನೂ ಕೇಂದ್ರ ಸರ್ಕಾರದ ಸುಳ್ಳು ಅಫಿಡವಿಟ್ಟನ್ನ ನಂಬಿ ಸುಪ್ರೀಂ ಕೋರ್ಟ್ ಈ ವಿಚಾರನೆಯನ್ನ ನಿರಾಕರಿಸಿದೆ. ಡೀಲ್ ನಲ್ಲಿ ಅಷ್ಟು ದೊಡ್ಡ ಮೊತ್ತ ಯಾಕೆ ನಿಗದಿಪಡಿಸಿದ್ದಾರೆಂಬ ಪ್ರಶ್ನೆಗೆ ಉತ್ತರವನ್ನೂ ನೀಡಿಲ್ಲ ಅಂತ ಗರಂ ಆಗಿ ಉತ್ತರಿಸಿದ್ದಾರೆ.