ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಪೆಥಾಯ್ ಚಂಡ ಮಾರುತದ ಪರಿಣಾಮ ಕರ್ನಾಟಕದಲ್ಲಿ ಕೊರೆಯುವ ಚಳಿ ಆರಂಭವಾಗಿದೆ.
ಆಂಧ್ರಪ್ರದೇಶದಲ್ಲಿ ಪೆಥಾಯ್ ಚಂಡಮಾರುತ ಅಬ್ಬರದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಕೊರೆಯುವ ಚಳಿ ಹೆಚ್ಚಾಗಿದೆ.
ಕಳೆದ ಮೂರು ದಿನಗಳಿಂದ ಚಳಿ ಹೆಚ್ಚಾಗಿದ್ದು ಸಂಜೆ 6 ರಿಂದ ಮರುದಿನ ಬೆಳಗ್ಗೆ ಸುಮಾರು 7 ಗಂಟೆಯವರೆಗೂ ವಿಪರೀತ ಚಳಿಯಿದೆ. ವೃದ್ಧರು, ಮಕ್ಕಳು, ಅನಾರೋಗ್ಯ ಪೀಡಿತರು ಚಳಿಗೆ ನಡುಗುವಂತಾಗಿದೆ.