ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ ಜಿಲ್ಲೆ ಸಮಿತಿಯಿಂದ ರೈತರ ಬೃಹತ್ ಪ್ರತಿಭಟನೆಯ ಮೆರವಣೆಗೆ ಪುತ್ತೂರಿನಲ್ಲಿ ನಡೆಯಿತು.
ಎಂ.ಟಿ ರಸ್ತೆಯಿಂದ ಸಾಗಿದ ಮೆರವಣಿಗೆ ಮಿನಿವಿಧಾನ ಸೌಧದಲ್ಲಿ ಸಭೆ ಸೇರಿತು. ಪ್ರತಿಭಟನೆ ವೇಳೆ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ಮಾಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಇನ್ನೇನು ಮನೆ ಮುಂದೆ ಪ್ರತಿಭಟನೆ ಮಾಡಬೇಕಾ ಎಂದು ಪ್ರಶ್ನಿಸಿದರು.
ನಂತರ ರೈತ ಮುಖಂಡ ಶ್ರೀ ಹೆಚ್. ಆರ್ ಬಸವರಾಜ್ ಮಾತನಾಡಿ, ಸರ್ಕಾರದವರು ಕೇವಲ ರಾಮ ರಾಮ ಎಂದು ಜಪ ಮಾಡೋದಲ್ಲ. ರೈತನ ಜಪ ಮಾಡಿ, ರೈತನ ಹೊಟ್ಟೆ ತುಂಬಿಸಬೇಕೆಂದು. ರಾಮ ಜಪ ಮಾಡೋದ್ರಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ನೀವು ನಮ್ಮ ಪರವಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲುತ್ತೀರಿ ಇಲ್ಲವಾದಲ್ಲಿ ಮನೆಗೆ ಹೋಗುತ್ತೀರಿ ಎಂದರು.
ಈ ವೇಳೆ ರೈತ ಸಂಘದಿಂದ ರೈತರ ಸಂಕಷ್ಟಗಳಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಪುತ್ತೂರು ಸಹಾಯಕ ಆಯುಕ್ತ ಡಾ,ಸಿ ಕೆ ಕೃಷ್ಣ ಮೂರ್ತಿ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿ ಆದಷ್ಟು ಶೀಘ್ರ ಪರಿಹಾರ ದೊರೆಯುವಂತೆ ಮಾಡುತ್ತೇನೆಂದು ಭರವಸೆ ನೀಡಿದರು.