ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಹಳಿಯಾಳದ ಬೊಮ್ಮನಹಳ್ಳಿಯ ಬಳಿ ಕಾಳಿನದಿ ದಂಡೆಗೆ ಬಟ್ಟೆ ಒಗೆಯಲು ನದಿಗೆ ಇಳಿದಿದ್ದ ಸಂದರ್ಭ ದುರಂತ ಸಂಭವಿಸಿದೆ.
ಧೂಳು ಗಾವಡೆ ಹಾಗೂ ಮಕ್ಕಳಾದ ಕೃಷ್ಣ ಧೂಳು ಗಾವಡೆ, ಗಾಯತ್ರಿ ಧೂಳು ಗಾವಡೆ ಹಾಗೂ ಸತೀಶ್ ಬೀರು ಗಾವಡೆ ಮೃತ ದುರ್ದೈವಿಗಳು. ಇನ್ನು ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆ ರಾಮಿಬಾಯಿ ಎಂಬುವವರನ್ನು ಸ್ಥಳೀಯರು ರಕ್ಷಿಸಿದ್ದಾರೆ.