Saturday, September 21, 2024
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕುದ್ಕಡಿಯವರ ಸಂಸ್ಮರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಡಡಿ ಸೆಂಟರ್‌ನಲ್ಲಿ ಕುದ್ಕಡಿ ವಿಶ್ವನಾಥ್ ರೈ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ಕರೆಯಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಸಂಚಾಲಕ ಪಿ.ವಿ. ಗೋಕುಲ್‌ನಾಥ್ ಮಾತನಾಡಿ, “ತುಳುನಾಡು ಮತ್ತು ಕಲೆಗೆ ಮಿಡಿದ ಹೃದಯವೆಂದರೆ ಅದು ಕುದ್ಕಡಿ ವಿಶ್ವನಾಥ ರೈಯವರದು. ಬದುಕಿನುದ್ದಕ್ಕೂ ಅತ್ಯಂತ ಶಿಸ್ತು ಮತ್ತು ಲವಲವಿಕೆಯಿಂದ ಕಲಾಮಾತೆಯವನ್ನು ಗೌರವಿಸಿದವರು ಈಗ ನಮ್ಮನ್ನಗಲಿದ್ದಾರೆ ಎಂದರೆ ಬಹಳಷ್ಟು ನೋವಿನ ಸಂಗತಿ. ನನ್ನ ಗುರುಗಳಾಗಿ ನನಗೆ ಸ್ಪೂರ್ತಿ ತುಂಬಿದ್ದರು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ” ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಉಪನ್ಯಾಸಕಿ ಗೀತಾ ಕೊಂಕೋಡಿ ಮಾತನಾಡಿ, “ಅತ್ಯಂತ ಉತ್ಸಾಹಿ, ಮೇರು ವ್ಯಕ್ತಿತ್ವದ ಕುದ್ಕಡಿ ವಿಶ್ವನಾಥ ರೈಯವರು ಅತ್ಯಂತ ಪ್ರೀತಿಯಿಂದ ಕಲೆಯನ್ನು ಗೌರವಿಸಿದವರು. ಬದುಕು ಸಾರ್ಥಕ ಎನಿಸುವಷ್ಟು ಸುಲಲಿತವಾಗಿ ಬದುಕನ್ನು ಬದುಕಿದವರು. ತನ್ನ ಅಪೂರ್ವವಾದ ಜ್ಞಾನ ಭಂಡಾರದಿಂದ ಬಹಳಷ್ಟು ಕವಿತೆ, ಕವನ, ಬರಹಗಳನ್ನು ಬರೆದು ಸಹ ಓದುಗರನ್ನು ಸೆಳೆದವರು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್, ಉಪನ್ಯಾಸಕಿ ರೇಣುಕಾ. ಪಿ. ಉಪಸ್ಥಿತರಿದ್ದರು. ಉಪನ್ಯಾಸಕಿ ವಿಸ್ಮಿತಾ ಮಧುಕರ್ ಮುಳಿಬೈಲ್ ಕಾರ್ಯಕ್ರಮ ನಡೆಸಿಕೊಟ್ಟರು.