Saturday, September 21, 2024
ಸುದ್ದಿ

ಡಿ.21 ರಿಂದ 30 ರವರೆಗೆ ಕರಾವಳಿ ಕಲೋತ್ಸವ ನಡೆಯಲಿದೆ: ಸುದರ್ಶನ್ ಜೈನ್ – ಕಹಳೆ ನ್ಯೂಸ್

ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇವರ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2018-19 ಕಾರ್ಯಕ್ರಮ ಡಿ.21 ರಿಂದ ಡಿ. 30 ರವರೆಗೆ ಬಿಸಿರೋಡಿನ ಜೋಡುಮಾರ್ಗ ಉದ್ಯಾನವನದ ಬಳಿಯಲ್ಲಿರುವ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಹತ್ತು ದಿನಗಳ ಕಾಲ ನಡೆಯಲಿದೆ ಎಂದು ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಅವರು ಬಿಸಿರೋಡಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿ.21 ರಿಂದ 23 ರವರೆಗೆ ಸಂಜೆ 6 ರಿಂದ ಚಿಣ್ಣರೋತ್ಸವ ಕಾರ್ಯಕ್ರಮ, ಡಿ. 23 ರಿಂದ 30 ರ ತನಕ ಸಂಜೆ 4 ರಿಂದ ರಾಜ್ಯ ಮಟ್ಟದ ನ್ರತ್ಯ ಪ್ರದರ್ಶನ ಮತ್ತು ಡಿ. 24 ರಿಂದ 29 ರ ವರೆಗೆ ಸಂಜೆ 6 ರಿಂದ ನಾಟಕೋತ್ಸವ ಹಾಗೂ ಜಿಲ್ಲಾ ಮಟ್ಟದ ಸಿಂಗಾರಿ ಮೇಳ, ಜಾನಪದ ನ್ರತ್ಯ, ಭರತನಾಟ್ಯ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಕಲಾವಿದರ ಸಹಿತ ಅನೇಕ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಜಾಹೀರಾತು

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಯ ಸಚಿವೆ ಜಯಮಾಲ , ಸಚಿವ ಯು.ಟಿ.ಖಾದರ್, ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. ‌

ಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಜಯರಾಮ ರೈ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಸಮಿತಿಯ ಪ್ರಮುಖರಾದ ಎಚ್.ಕೆ.ನಯನಾಡ್, ಸೇಸಪ್ಪ ಮಾಸ್ತರ್, ಪರಮೇಶ್ವರ ಮೂಲ್ಯ, ಮಧುಸೂದನ್ ಶೆಣೈ, ಜಯಾನಂದ ಪೆರಾಜೆ, ಮಹಮ್ಮದ್ ನಂದರಬೆಟ್ಟು, ಸುರೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.