Recent Posts

Tuesday, November 26, 2024
ರಾಜಕೀಯಸುದ್ದಿ

ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ರೈ ದೆಹಲಿ ಚಲೋ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ‌ ಸಚಿವ ಬಿ.ರಮಾನಾಥ ರೈ ಅವರು‌ ದಿಢೀರ್ ಅಗಿ ದೆಹಲಿಯತ್ತ ಸೋಮವಾರ ನಡೆದಿದ್ದಾರೆ.‌
ರೈ ಅವರ ದೆಹಲಿ ಚಲೋ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ರಮಾನಾಥ ರೈ ಅವರು ರಾಜ್ಯ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಒಲವು ತೋರುತ್ತಿದ್ದಾರೆ ಎಂಬುದು ಇತ್ತೀಚಿನ ಅವರ ನಡವಳಿಕೆಗಳು ಸ್ಪಷ್ಟಪಡಿಸಿದೆ. ಅಲ್ಲದೆ ಪಕ್ಷ ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿ ಮಾಡುವುದಾಗಿಯೂ ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೈಅವರ ಏಕಾಏಕಿ ದೆಹಲಿ ಪ್ರವಾಸ ಮಾತ್ರ ರಾಜ್ಯ ರಾಜಕಾರಣ ದಲ್ಲಿ ಹಲವಾರು ಊಹಾಪೋಹಗಳು ಕೇಳಿ ಬರುತ್ತಿದೆ.
ಹೈಕಮಾಂಡ್ ಜೊತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾತುಕತೆಯನ್ನು ನಡೆಸಲು ದೆಹಲಿಯತ್ತ ಮುಖಮಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯಲ್ಲಿ ಆಸ್ಕರ್ ಪೆರ್ನಾಂಡಿಸ್ ಮತ್ತು ವಿಶ್ವನಾಥ್ ಅವರ ಜೊತೆಯಲ್ಲಿ ರಹಸ್ಯವಾಗಿ ಮಾತನಾಡಿ ದ ರೈ ಅವರು ಮುಂದಿನ ಲೋಕಸಭಾ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳುವ ಪೂರ್ವ ತಯಾರಿಗೆ ಇದು ಮೊದಲ ಹೆಜ್ಜೆ ಎನ್ನಲಾಗುತ್ತದೆ.

ಇತ್ತೀಚಿಗೆ ಹೈಕಮಾಂಡ್ ಮಂಗಳೂರು ಲೋಕಸಭಾ ಚುನಾವಣೆಗೆ ಮಂಗಳೂರಿನಿಂದ ರಮಾನಾಥ ರೈ ಹಾಗೂ ಉಡುಪಿಯಿಂದ ವಿನಯಕುಮಾರ್ ಸೊರಕೆ ಯವರ ಹೆಸರು‌ ಅಂತಿಮಗೊಳಿಸುವ ಸಾಧ್ಯತೆ ಗಳಿವೆ ಎಂಬ ಬಗ್ಗೆ ಯೂ ಪಕ್ಷದ ವಲಯದಲ್ಲಿ ಮಾತುಗಳು ಕೇಳಿ ಬಂದಿತ್ತು.‌

ಪಂಚರಾಜ್ಯಗಳ ಚುನಾವಣೆಯ ಬಳಿಕ ಹುಮ್ಮಸ್ಸಿನಲ್ಲಿರುವ ಕಾಂಗ್ರೇಸ್ ಪಕ್ಷ ದ ಕಾರ್ಯಕರ್ತರು ಮಾಜಿ ಸಚಿವ ರೈ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸುತ್ತದೆ ಎಂಬುದು ಅವರ ಆಪ್ತವಲಯ ತಿಳಿಸಿದೆ.

ಅಂತೂ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಆರು ಬಾರಿ ಕಾಂಗ್ರೇಸ್ ಶಾಸಕರಾಗಿ ಸಚಿವರಾಗಿ ಅನೇಕ ಜವಬ್ದಾರಿ ಸ್ಥಾನವನ್ನು ಅಲಂಕರಿಸಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗೆ ರೂವಾರಿ, ಬಂಟ್ವಾಳ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಯ ಹರಿಕಾರ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡ ಬಳಿಕ ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹುಮ್ಮಸ್ಸು ತೋರುತ್ತಿರುವುದು, ಕಾರ್ಯಕರ್ತರಲ್ಲಿ ಒಂದಿಷ್ಟು ಉಲ್ಲಾಸ ತಂದಿದೆ.

ರೈ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಅಥವಾ ಹೈಕಮಾಂಡ್ ಇವರಿಗೆ ಟಿಕೆಟ್ ನೀಡುತ್ತಾ ಎಂಬುದು ಇಂಟ್ ರೆಸ್ಟಿಂಗ್ ಸ್ಟೋರಿ.