ದ.ಕ.ಜಿ.ಪ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಕಡ್ಯ ಕಡಬ ತಾಲೂಕು ಇಲ್ಲಿ ವಜ್ರ ಮಹೋತ್ಸವದ ಪ್ರಯುಕ್ತ ದಿನಾಂಕ 16-12-2018 ಆದಿತ್ಯವಾರದಂದು ” ಕ್ರೀಡಾ ಸಂಭ್ರಮ” ಸಾರ್ವಜನಿಕ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಶ್ರೀ ನಿತೇಶ್ ಕಲ್ಲೂರು ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಸೋಮಶೇಖರ ದೊಡ್ಡಮನೆ ನಿವೃತ್ತ ಪೋಲಿಸ್ ಸಹಾಯಕ ಮೀಸಲು ಉಪ ನಿರೀಕ್ಷಕರು ಮಂಗಳೂರು, ಶ್ರೀ ಗಣೇಶ್ ದೊಡ್ಡಮನೆ ನಿವೃತ್ತ ಸೈನಿಕರು, ಶ್ರೀ ಮೋಹನಚಂದ್ರ ಬರಮೇಲು ನಿವೃತ್ತ ಸೈನಿಕರು, ಶ್ರೀ ಶಾಂತಕುಮಾರ್ ಸಿ ಆರ್ ಸಿ ಖ್ಯಾತ ವಾಲಿಬಾಲ್ ಆಟಗಾರರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ, ಉಪಾಧ್ಯಕ್ಷರಾದ ಶ್ರೀ ಯಶೋದರ ಗೌಡ ಪಲ್ಲತ್ತಡ್ಕ, ಕಡಬ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ರಘುಚಂದ್ರ ಪನೆಜಾಲು, ವಜ್ರವಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಾಸುದೇವ ಭಟ್ ಕಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಕೊಡಮಾಡಿದ ಸಮವಸ್ತ್ರವನ್ನು ಹಿರಿಯ ವಿದ್ಯಾರ್ಥಿಗಳ ಪರವಾಗಿ ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಪುನೀತ್ ಹಾಗೂ ಮಲ್ಲಿಕಾ ವಿತರಿಸಿದರು. ಬಳಿಕ ವಿವಿಧ ಸ್ಪರ್ಧೆಗಳನ್ನು ಸಾರ್ವಜನಿಕರಿಗೆ ಏರ್ಪಡಿಸಲಾಯಿತು.
ಶಾಲಾ ಪುಟಾಣಿಗಳಿಂದ ಪಥಸಂಚಲನ ಹಾಗೂ ಅಥಿತಿಗಳಿಗೆ ಗೌರವ ವಂದನಾ ಕಾರ್ಯಕ್ರಮ ನಡೆಯಿತು. ಊರಿನ ಗಣ್ಯರಾದ ವಿಠಲ ಭಟ್ ಕಡ್ಯ , ಗಂಗಾಧರ, ಸಿ.ಎ ಬ್ಯಾಂಕು ಕೊಣಾಜೆ ಶಾಖೆಯ ವ್ಯವಸ್ಥಾಪಕರಾದ ಶ್ರೀ ಆನಂದ ಕೊಂಕ್ಯಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾಪ್ರತಿನಿದಿ ಶ್ರೀಮತಿ ಗೋಪಿ , ಅಂಗನವಾಡಿ ಕಾರ್ಯಕರ್ತೆ ಹೇಮಲತಾ , ಮಾಲತಿ, ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾವತಿ ಮತ್ತು ಶ್ರೀಮತಿ ಚಂದ್ರಾವತಿ ಹಾಗೂ ಶಾಲಾ ವಿವಿಧ ಸಮಿತಿಯವರಾದ ಕೃಷ್ಣಪ್ಪ ಗೌಡ ಹಾಕೋಟೆಕಾನ, ವಾಸುದೇವ ಕೆರ್ನಡ್ಕ, ತಿಮ್ಮಪ್ಪ ಪಟ್ಲ, ಲಿಂಗಪ್ಪ ಮುಚ್ಚಿರೋಡಿ, ರಾಮಣ್ಣ ಆಚಾರಿ, ರುಕ್ಮಿಣಿ ಸಾಕೋಟೆಜಾಲು, ಶಾಲಿನಿ ಪಟ್ಲ ಸತೀಶ್ ಕಲ್ಲೂರು ಮತ್ತಿತರು ಉಪಸ್ಥಿತರಿದ್ದರು.
ವಜ್ರಮಹೋತ್ಸವದ ಸವಿನೆನಪಿನ ಯೋಜನೆಗಳಿಗೆ ವಿದ್ಯಾಭಿಮಾನಿಗಳು ಧನಸಹಾಯ ನೀಡಿರುತ್ತಾರೆ. ಇದಿನದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳೊಂದಿಗೆ ಎಸ್.ಡಿ.ಎಮ್ .ಸಿ, ಹಿರಿಯ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮುಖ್ಯಗುರುಗಳಾದ ಶ್ರೀ ರಾಮಕೃಷ್ಣ ಸ್ವಾಗತಿಸಿ, ನಾಗವೇಣಿ ವಂದಿಸಿದರು. ಶಿಕ್ಷಕರಾದ ಶ್ರೀ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು. ಹಾಲೇಶ್, ಪುಷ್ಪಾವತಿ , ಪ್ರಮೀಳಾ,ಲತಾ ಸಹಕರಿಸಿದರು.