ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಹೈದರಾಬಾದ್ ನ ಸೈನಾ ನೆಹವಾಲ್ ಗೆ ಮದುವೆಗೆ ಮಂಗಳೂರಿನ ಚಿತ್ರಗಾರ್ತಿ ರಚಿಸಿದ ಕಲಾಕೃತಿ ಉಡುಗೊರೆಯಾಗಿ ಸಿಕ್ಕಿದೆ.
ರಾಜ್ಯದ ಅತಿ ವೇಗದ ಚಿತ್ರಗಾರ್ತಿ ಎಂದು ಕರೆಯಲ್ಪಡುವ ಮಂಗಳೂರಿನ ಶಬರಿ ಗಾಣಿಗ ಅವರ ಕಲಾಕೃತಿ ಮದುವೆಯ ಉಡುಗೊರೆಯಾಗಿ ಶೈನಾ ಮನೆ ಸೇರಿದೆ.
ಸೈನಾ ಮತ್ತು ಬ್ಯಾಡ್ಮಿಂಟನ್ ಆಟಗಾರ ಪಾರುಪಳಿ ಕಶ್ಯಪ್ ಮದುವೆ ಇತ್ತೀಚೆಗೆ ನಡೆಯಿತು. ಮದುವೆ ಸಮಾರಂಭಕ್ಕೆ ಮಂಗಳೂರಿನ ಆರ್ ಜೆ ಆರೋಲ್‌ಗೆ ಆಹ್ವಾನವಿತ್ತು. ಮದುವೆ ಔತಣಕ್ಕೆ ತೆರಳುವ ಆತ ತಾನೊಂದು ವಿಶೇಷವಾದ ಉಡುಗೊರೆ ನೀಡಬೇಕು ಎನ್ನುವ ಆಲೋಚನೆ ಬಂದದ್ದೇ ತಡ, ಆತ ಕಲಾವಿದೆ ಶಬರಿ ಅವರನ್ನು ಸಂಪರ್ಕಿಸಿದರು.
ಅತಿ ವೇಗದ ಚಿತ್ರಗಾರ್ತಿಯಾಗಿರುವ ಶಬರಿ ತಕ್ಷಣ ತನ್ನ ವಿಶೇಷ ನೈಪುಣ್ಯದ ಗ್ಲೋ ಆರ್ಟ್ ಮೂಲಕ ಸೈನಾ-ಕಶ್ಯಪ್ ಅವರ ‘ಕಪಲ್ ಬಸ್ಟ್ ರಚಿಸಿ ನೀಡಿಯೇ ಬಿಟ್ಟರು. ಕುಡ್ಲದ ಹುಡುಗಿ ರಚಿಸಿದ ಚಿತ್ರ ಅಂತಾರಾಷ್ಟ್ರೀಯ ಆಟಗಾರ್ತಿಯ ಮನೆ ಮನದಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ.