Friday, September 20, 2024
ಸುದ್ದಿ

ದೇಶದ 35 ನೇ ಸಂವಹನ ಉಪಗ್ರಹ ಜಿಸ್ಯಾಟ್ – 7ಎ ಉಡಾವಣೆಗೆ ಕ್ಷ ಣಗಣನೆ – ಕಹಳೆ ನ್ಯೂಸ್

ದೇಶದ 35 ನೇ ಸಂವಹನ ಉಪಗ್ರಹ ಜಿಸ್ಯಾಟ್ – 7ಎ ಉಡಾವಣೆಗೆ ಕ್ಷ ಣಗಣನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಬುಧವಾರ ಸಂಜೆ 4.10ಕ್ಕೆ ಉಪಗ್ರಹ ಉಡಾವಣೆಯಾಗಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ 2,250 ಕೆ.ಜಿ ತೂಕದ ಈ ಉಪಗ್ರಹ, ಜಿಎಸ್‌ಎಲ್‌ವಿ-ಎಫ್11 ರಾಕೆಟ್ ಮೂಲಕ ಅಂತರಿಕ್ಷಕ್ಕೆ ನೆಗೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಸ್ಯಾಟ್ -7ಎ 8 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆ ಕಲ್ಪಿಸಲು ನೆರವಾಗಲಿದೆ.

ಜಾಹೀರಾತು

ಅಲ್ಲದೇ ಈ ಉಪಗ್ರಹ ರೇಡಾರ್ ಕೇಂದ್ರಗಳು, ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ. ಈ ವರ್ಷ ಶ್ರೀಹರಿಕೋಟದಿಂದ ಉಡಾವಣೆಯಾಗುತ್ತಿರುವ ಏಳನೇ ಉಪಗ್ರಹ ಇದಾಗಿದೆ.