ಸುಳ್ಯ: ಹಿಂಡು ಹಿಂಡಾಗಿ ನಾಡಿಗೆ ನುಗ್ಗುವ ಕಾಡುಕೋಣಗಳ ಉಪಟಳ ಸುಳ್ಯ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತಿದೆ. ಆನೆ, ಮಂಗ, ಕಾಡು ಹಂದಿ ಹೀಗೆ ಹಲವು ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ಕೃಷಿಕರಿಗೆ ಕಾಡುಕೋಣಗಳು ಎಗ್ಗಿಲ್ಲದೆ ನಾಡಿಗೆ ನುಗ್ಗುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕಾಟೂರು, ಎರ್ಮೆಕಜೆ, ಗಬ್ಬಲಡ್ಕ ಭಾಗಗಳಲ್ಲಿ ಹಲವು ಸಮಯದಿಂದ ಕಾಡು ಕೋಣಗಳ ಹಿಂಡು ನಿರಂತರ ನಾಡಿಗೆ ನುಗ್ಗುತ್ತಿದ್ದು ಕೃಷಿಕರ ನಿದ್ದೆಗೆಡಿಸುತಿದೆ.