ಪುತ್ತೂರು: ವಿವಿಧ ಬೇಡಿಕೆಯನ್ನು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗದ ವತಿಯಿಂದ ಅನಿರ್ದಿಷ್ಟವದಿ ಮುಷ್ಕರ ನಡೆಯಿತು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರು ಅಂಚೆ ವಿಭಾಗ ಕಾರ್ಯದರ್ಶಿ ಸುನಿಲ್ ದೇವಾಡಿಗ, ಈ ಹಿಂದೆ ಗ್ರಾಮೀಣ ಅಂಚೆ ಇಲಾಖಾ ಕಾರ್ಯಕರ್ತರಿಗೆ ಮೂರು ಪಟ್ಟು ವೇತನ ಅಧಿಕಗೊಳಿಸಲಾಗಿದೆ ಅಂತ ಕೇಂದ್ರ ಸರಕಾರ ಸುಳ್ಳು ಸುದ್ದಿ ಹಬ್ಬಿಸಿದೆ.
ಗ್ರಾಮೀಣ ಅಂಚೆ ಇಲಾಖಾ ಸಿಬ್ಬಂದಿಗಳಿಗೆ ಸವಲತ್ತು ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಅಂದ್ರು. ಪ್ರತಿಭಟನಾ ವೇಳೆ ಕೇಂದ್ರ ಸರಕಾರ ಹಾಗೂ ಪ್ರದಾನ ಅಂಚೆ ಇಲಾಖಾ ವಿರುದ್ದ ಘೋಷಣೆ ಹಾಕಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದ್ರು
ಈ ವೇಳೆ ಪುತ್ತೂರು ಅಂಚೆ ವಿಭಾಗ ಅಧ್ಯಕ್ಷರು ವಿಠಲ್ ಪೂಜಾರಿ, ಕರ‍್ಯದರ್ಶಿ ಸಂತೋಷ್ ಮತ್ತಿತ್ತರರು ಉಪಸ್ಥಿತರಿದ್ದರು