Recent Posts

Tuesday, January 21, 2025
ಸುದ್ದಿ

ಇಷ್ಟಲಿಂಗ ಪೂಜೆ ನೆರವೇರಿಸಿದ ಸಿದ್ದಗಂಗಾ ಶ್ರೀಗಳು – ಕಹಳೆ ನ್ಯೂಸ್

ಚೆನ್ನೈನಲ್ಲಿ ಚಿಕಿತ್ಸೆ ಮುಗಿಸಿಕೊಂಡು ಸಿದ್ದಗಂಗಾ ಮಠಕ್ಕೆ ವಾಪಾಸಾಗಿರುವ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಗ್ಗೆ ಲವಲವಿಕೆಯಿಂದ ಎದ್ದು ಇಷ್ಟ ಲಿಂಗ ಪೂಜೆ ನೆರವೇರಿಸಿದ್ದಾರೆ.

ಮುಂಜಾನೆ ಎದ್ದ ಶ್ರೀಗಳು ಸ್ನಾನ ಮುಗಿಸಿ ಬಂದು ಇಷ್ಟಲಿಂಗ ಪೂಜೆ ಸಲ್ಲಿಸಿದರು. ಬಳಿಕ ಇಡ್ಲಿ ಮತ್ತು ಹಣ್ಣು ಹಂಪಲುಗಳನ್ನು ಸ್ವೀಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಠದಲ್ಲಿರುವ ವೈದ್ಯರು ಶ್ರೀಗಳ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ.ಶ್ರೀಗಳಿಗೆ ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದ್ದು ದೇಹ ಆಯಾಸವಾಗದಂತೆ ಹೆಚ್ಚಿನ ಎಚ್ಚರ ವಹಿಸಲು ವೈದ್ಯರು ಸೂಚನೆ ನೀಡಿದ್ದಾರೆ.ಆದರೂ ಶ್ರೀಗಳು ಭಕ್ತರನ್ನು ಕಾಣಬೇಕೆಂದು ಪಟ್ಟು ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು