Tuesday, January 21, 2025
ಸುದ್ದಿ

ಆಧಾರ್ ನೀಡಲು ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಗ್ರಾಹಕರನ್ನು ಒತ್ತಾಯಿಸಿದರೆ ಕೋಟಿ ರೂ ದಂಡ – ಕಹಳೆ ನ್ಯೂಸ್

ಗುರುತು ಹಾಗೂ ವಿಳಾಸ ದಾಖಲೆಗಾಗಿ ಅಧಾರ್ ನೀಡಲೇಬೇಕು ಎಂದು ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಒಂದು ವೇಳೆ ಒತ್ತಾಯ ಮಾಡಿದರೆ 1 ಕೋಟಿ ರೂ. ದಂಡ ತೆರಬೇಕಾಗುತ್ತದೆ.

ಅಲ್ಲದೆ ಹೀಗೆ ಒತ್ತಾಯ ಮಾಡಿದ ಸಿಬ್ಬಂದಿಯು 10 ವರ್ಷಗಳವರೆಗೆ ಜೈಲು ವಾಸ ಅನುಭವಿಸಬೇಕಾಗುತ್ತದೆ.
ಈ ದಂಡದ ವಿವರಗಳನ್ನು ಕೇಂದ್ರ ಸರ್ಕಾರ ಸೋಮವಾರ ಅನುಮೋದಿಸಿದ ತಿದ್ದುಪಡಿಯಲ್ಲಿ ವಿವರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆವೈಸಿ ನಿಯಮಾವಳಿಯನ್ನು ಪೂರೈಸಲು ಗ್ರಾಹಕರು ಆಧಾರ್ ನೀಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಆಧಾರ್ ಮಾತ್ರ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಣ ದುರ್ಬಳಕೆ ಕಾಯ್ದೆ ಮತ್ತು ಭಾರತೀಯ ಟೆಲಿಗ್ರಾಫ್ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪಿಸಿದೆ.