Tuesday, January 21, 2025
ಸುದ್ದಿ

ಜನತೆಯನ್ನು ಕಂಗೆಡಿಸಿದ ಬ್ಯಾಂಕ್‌ಗಳ ಸಾಲು ರಜೆ – ಕಹಳೆ ನ್ಯೂಸ್

ಬ್ಯಾಂಕ್‌ಗಳ ಸಾಲು ಸಾಲು ರಜೆ ಇದೀಗ ಜನತೆಯನ್ನು ಕಂಗೆಡಿಸಿಬಿಟ್ಟಿದೆ, ಡಿಸೆಂಬರ್ 21 ರಿಂದ ಡಿಸೆಂಬರ್ 26 ರ ತನಕ ಒಂದು ದಿನ ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕುಗಳಿಗೆ ರಜೆಯಿರುವ ಸಾಧ್ಯತೆಯಿದೆ.

ಡಿಸೆಂಬರ್ 21 ರಂದು ಬ್ಯಾಂಕ್ ಅಧಿಕಾರಿಗಳ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ರೆ, ಡಿಸೆಂಬರ್ 22 ತಿಂಗಳ ನಾಲ್ಕನೇ ಶನಿವಾರವಾದುದರಿಂದ ರಜೆಯಾಗಿದೆ. ಡಿಸೆಂಬರ್ 23 ರವಿವಾರ ಮತ್ತೊಂದು ರಜಾ. ಸೋಮವಾರ ಒಂದು ದಿನ ಬ್ಯಾಂಕುಗಳು ಎಂದಿನಂತೆ ಕಾರ್ಯಾಚರಿಸಿದರೆ, ಡಿಸೆಂಬರ್ 25 ರಂದು ಕ್ರಿಸ್ಮಸ್ ರಜೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 26 ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮತ್ತೊಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗೆ ಒಟ್ಟು 5 ದಿನ ಬಂದ್ ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲು ಸಾಲಾಗಿ ರಜೆಗಳು ಹಾಗೂ ಮುಷ್ಕರಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಎಟಿಎಂಗಳಲ್ಲಿ ಸಾಕಷ್ಟು ನಗದು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ.