Monday, January 20, 2025
ಸುದ್ದಿ

ಬಿಜೆಪಿ ಗೆಲ್ಲಲು ಮೋದಿ ಬದಲಿಗೆ ಗಡ್ಕರಿಗೆ ಪ್ರಧಾನಿ ಪಟ್ಟ ನೀಡಿ: ರೈತನಿಂದ ಪತ್ರ – ಕಹಳೆ ನ್ಯೂಸ್

“2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ನರೇಂದ್ರ ಮೋದಿಯವರ ಬದಲಿಗೆ ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಪಟ್ಟ ನೀಡಿ” ಎಂದು ಮಹಾರಾಷ್ಟ್ರದ ರೈತ ಮುಖಂಡರೊಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಿಗೆ ಪತ್ರ ಬರೆದಿದ್ದಾರೆ.

ರೈತ ಮುಖಂಡ ಕಿಶೋರ್ ತಿವಾರಿ ಎಂಬುವವರು ಆರೆಸ್ಸೆಸ್ ಮುಖಂಡರಾದ ಮೋಹನ್ ಜೀ ಭಾಗವತ್ ಮತ್ತು ಭಯ್ಯಾಜಿ ಸುರೇಶ್ ಜೋಶಿ ಅವರಿಗೆ ಪತ್ರ ಬರೆದಿದ್ದು, ‘ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳ ಫಲಿತಾಂಶ ದುರಹಂಕಾರದ ಪ್ರತಿಫಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪನಗದೀಕರಣ, ಜಿಎಸ್ಟಿ ಮತ್ತು ತೈಲ ಬೆಲೆ ಏರಿಕೆ ಮುಂತಾದ ನಿರ್ಧಾರಗಳೇ ಈ ಸೋಲಿಗೆ ಕಾರಣ’ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು