ಚಿಕ್ಕಮಗಳೂರು: ನಾಳೆ ನಡೆಯಲಿರುವ ದತ್ತಜಯಂತಿ ಹಿನ್ನಲೆಯಲ್ಲಿ ಮಾಲಾಧಾರಿ ಶಾಸಕ ಸಿ.ಟಿ.ರವಿ ಸೇರಿದಂತೆ ಮಾಲಾಧಾರಿಗಳಿಂದ ಪಡಿ ಸಂಗ್ರಹ ಕಾರ್ಯ ನೆರವೇರಿತು.
ಚಿಕ್ಕಮಗಳೂರಿನ ಬಸನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರ ಮಠದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಿದರು.
ಪಡಿಸಂಗ್ರಹಕ್ಕೆ ಅಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ ವಿಳ್ಯದೆಲೆಯನ್ನು ಮನೆಮಂದಿ ನೀಡಿದರು. ಈ ಪಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ಕೊಂಡೊಯ್ಯಲಿದ್ದಾರೆ.