Friday, November 15, 2024
ಸಿನಿಮಾಸುದ್ದಿ

ಕೆಜಿಎಫ್ ಹವಾ: ಭರ್ಜರಿ ಓಪನಿಂಗ್ ಪಡೆದುಕೊಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ – ಕಹಳೆ ನ್ಯೂಸ್

ಬೆಂಗಳೂರು: ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಇಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಕೆಜಿಎಫ್ ಸಿನಿಮಾ ವೀಕ್ಷಿಸಿದರು.

ಈಗಾಗಲೇ ನರ್ತಕಿ ಚಿತ್ರಮಂದಿರದ ಎದುರು ಯಶ್ ಅವರ 72 ಅಡಿ ಕಟೌಟ್ ನಿರ್ಮಿಸಲಾಗಿದೆ ಅಷ್ಟೇ ಅಲ್ಲ ಬೆಳಗ್ಗೆ 10 ಕ್ಕೆ ರಾಮಾಚಾರಿ ಯಶ್ ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಷ್ಟಾಭಿಷೇಕ ಮಾಡಲಾಗುವುದು.ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವ ಕೆಜಿಎಫ್ ಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಜೊತೆ ಚಿತ್ರ ನೋಡುತ್ತಿರುವುದು ವಿಶೇಷ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಜಿಎಫ್ ಸಿನೆಮಾದಲ್ಲಿ ಭರ್ಜರಿ ಡೈಲಾಗ್‌ಗಳಿಗೆ ಏನೂ ಕಮ್ಮಿ ಇಲ್ಲ.‘ಪವರ್ ಇದ್ದರೆ ಕಾಸು’, ‘ಪವರ್ ಫುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್’, ‘ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ’.

ಜಾಹೀರಾತು
ಜಾಹೀರಾತು
ಜಾಹೀರಾತು

‘ಗ್ಯಾಂಗ್ ಕಟ್ಟಿಕೊಂಡು ಬರುವವನು ಗ್ಯಾಂಗ್ ಸ್ಟರ್, ಹೀಗೆ ಚಿತ್ರದ ಉದ್ದಕ್ಕೂ ಪಂಚಿಂಗ್ ಲೈನ್ ಗಳು ನೋಡುಗರನ್ನ ಹುಚ್ಚೆಬ್ಬಿಸುವಂತೆ ಮಾಡುತ್ತೆ.ಮಾಸ್ ಅಭಿಮಾನಿಗಳು ಸಂಭ್ರಮ, ಸಡಗರ ಪಡಲು ಏನೇನು ಬೇಕೋ, ಅದೆಲ್ಲವೂ ‘ಕೆ.ಜಿ.ಎಫ್’ ಚಿತ್ರದಲ್ಲಿ ಪರ್ಫೆಕ್ಟ್ ಆಗಿದೆ.

ಇನ್ನೂ ಕ್ಲಾಸ್ ಪ್ರೇಕ್ಷಕರು ಬಯಸುವಂತೆ ಗಟ್ಟಿಯಾದ ಚಿತ್ರಕಥೆ, ತಾಯಿ ಸೆಂಟಿಮೆಂಟ್, ತಲೆದೂಗುವ ಹಾಡುಗಳು ‘ಕೆ.ಜಿ.ಎಫ್’ ಚಿತ್ರದಲ್ಲಿದೆ.ಕೆ.ಜಿ.ಎಫ್’ ಚಿತ್ರವನ್ನ ನೋಡಿದ್ಮೇಲೆ, ಎರಡು ವರ್ಷಗಳಿಂದ ಕಾದಿದ್ದಕ್ಕೂ ಸಾರ್ಥಕ ಎಂಬ ಭಾವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಮನದಲ್ಲಿ ಸದ್ಯ ಮೂಡಿದೆ. ಶೀರ್ಷಿಕೆಗೆ ತಕ್ಕ ಹಾಗೆ, ‘ಕೆ.ಜಿ.ಎಫ್’ ಚಿತ್ರದ ಕಥೆ ‘ಹುಟ್ಟು’ವುದು ಕೆಜಿಎಫ್‌ನಲ್ಲಿ ”ಪ್ರಬಲವಾಗಿ ಬೆಳೆದು, ದೊಡ್ಡ ಶ್ರೀಮಂತನಾಗಿ ಸಾಯುವೆ” ಎಂದು ತಾಯಿಗೆ ಮಾತು ಕೊಡುವ ಮಗ, ಮುಂದೆ ಹೇಗೆ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದರ ಸುತ್ತ ‘ಕೆ.ಜಿ.ಎಫ್’ ಚಿತ್ರದ ಫಸ್ಟ್ ಹಾಫ್ ಸಾಗುತ್ತದೆ.

ಚಿತ್ರದ ನರೇಶನ್ ಸ್ಟೈಲ್ ಬೊಂಬಾಟ್..!
ಕೆ.ಜಿ.ಎಫ್ ನಲ್ಲಿ ಹುಟ್ಟಿದ ರಾಕಿ, ‘ರಾಕಿ ಭಾಯ್’ ಆಗಿ ಬೆಳೆದ ರೀತಿಯನ್ನ ಹಂತ ಹಂತವಾಗಿ ಅನಂತ್ ನಾಗ್ ಅನಾವರಣಗೊಳಿಸಿರುವ ರೀತಿ ಚೆನ್ನಾಗಿದೆ. ‘ಕೆ.ಜಿ.ಎಫ್’ ಚಿತ್ರದ ನರೇಶನ್ ಸ್ಟೈಲ್ ಸೂಪರ್ ಆಗಿದೆ. ಹೀಗಾಗಿ, ಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಎಲ್ಲೂ ಬೋರ್ ಆಗುವುದಿಲ್ಲ.

ಎಂಬತ್ತರ ದಶಕದಲ್ಲಿ ನಡೆದ ಘಟನೆಯ ಸುತ್ತ ಸಾಗುವ ‘ಕೆ.ಜಿ.ಎಫ್’ ಕಥೆ ಫುಲ್ ಸ್ಪೀಡ್ ಆಗಿದೆ. ಮಾಸ್ ಅಭಿಮಾನಿಗಳು ಶಿಳ್ಳೆ ಹೊಡೆಯುವ ಪಂಚಿಂಗ್ ಡೈಲಾಗ್ಸ್ ಇರುವುದರಿಂದ ಪ್ರೇಕ್ಷಕರ ಗಮನ ಅತ್ತಿತ್ತ ಕದಲುವುದಿಲ್ಲ.

ಚಿತ್ರದಲ್ಲಿದೆ ಮೂರು ಭರ್ಜರಿ ಹಾಡುಗಳು..!
ರಾಕಿ ಭಾಯ್ ಎಂಟ್ರಿಗೆ ಒಂದು ಸಾಂಗು, ತಮನ್ನಾ ಜೊತೆಗೆ ಒಂದು ಸಾಂಗು ಸೇರಿದಂತೆ ಒಟ್ಟು ಮೂರು ಹಾಡುಗಳು ಫಸ್ಟ್ ಹಾಫ್ ನಲ್ಲಿದೆ. ಸಾಂಗು ಮತ್ತು ಫೈಟ್ಸ್ ಬಗ್ಗೆ ಕೆಮ್ಮಂಗಿಲ್ಲ. ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಯಶ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಫಸ್ಟ್ ಹಾಫ್ ನಲ್ಲಿ ಹೀರೋಯಿನ್ ಗೆ ಹೆಚ್ಚು ಕೆಲಸ ಇಲ್ಲ.

ಇಂಟರ್ವೆಲ್ ನಲ್ಲಿ ಟ್ವಿಸ್ಟ್.!
ಮೊದಲಾರ್ಧದಲ್ಲಿ ರಾಕ್ ಭಾಯ್‌ನ ಮುಂಬೈ ಮತ್ತು ಬೆಂಗಳೂರು ಅಧ್ಯಾಯ ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ದ್ವಿತೀಯಾರ್ಧದಲ್ಲಿ ‘ಕೆ.ಜಿ.ಎಫ್’ ಪರಿಚಯವಾಗುತ್ತದೆ. ‘ಕೆ.ಜಿ.ಎಫ್’ಗೆ ರಾಕಿ ಭಾಯ್ ಎಂಟ್ರಿ ಕೊಟ್ಟ ಮೇಲೆ, ಏನಾಗಬಹುದು ಅನ್ನೋದೆ ಚಿತ್ರದ ಟ್ವಿಸ್ಟ್.

ಅದನ್ನ ನೀವು ಥಿಯೇಟರಲ್ಲೇ ನೋಡಿ ಎಂಜಾಯ್ ಮಾಡಿ ಕೆಜಿಎಫ್ ಚಿತ್ರದ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಜಗತ್ತಿನಾದ್ಯಂತ 2000 ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಿಯೇ ಸಿದ್ಧ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. ಒಟ್ಟಿನಲ್ಲಿ ಯಶ್ ಕೆಜಿಎಫ್ ಸ್ಯಾಂಡಲ್ವುಡ್‌ನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡುವುದರಲ್ಲಿ ಡೌಟೇ ಇಲ್ಲ.

ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್