Friday, November 15, 2024
ಸುದ್ದಿ

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ಆಯ್ಕೆಯಾದ ಡಬ್ಲುವಿ ರಾಮನ್ – ಕಹಳೆ ನ್ಯೂಸ್

ನವ ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಡಬ್ಲುವಿ ರಾಮನ್ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟ ಪಡಿಸಿದೆ. ದ. ಆಫ್ರಿಕಾದ ಗ್ಯಾರಿ ರ‍್ಸ್ಟನ್ ಮತ್ತು ಕರ‍್ನಾಟಕದ ವೆಂಕಟೇಶ್ ಪ್ರಸಾದ್ ಅವರನ್ನು ಮೀರಿ ಅಂತಿಮವಾಗಿ ರಾಮನ್ ಅವರನ್ನು ಅಂತಿಮಮಾಡಲಾಗಿದೆ.

ಜನವರಿಯಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದ್ದು ಅಷ್ಟರೊಳಗೆ ನೂತನ ಕೋಚ್ ಆಯ್ಕೆಯನ್ನು ಅಂತಿಮಗೊಳಿಸಬೇಕಿತ್ತು. ಅದರಂತೆ ಕೋಚ್ ಹುದ್ದೆಗೆ ಒಟ್ಟು 28 ಮಂದಿ ಅರ್ಜಿ ಸಲ್ಲಿಸಿದ್ದರು. ಮಹಿಳಾ ಕೋಚ್ ಹುದ್ದೆ ಆಯ್ಕೆಗೆ ಮಾಜಿ ನಾಯಕ ಕಪಿಲ್​ದೇವ್, ಅಂಶುಮನ್ ಗಾಯಕ್ವಾಡ್ ಹಾಗು ಶಾಂತ ರಾಮರಾಸ್ವಾಮಿ ಅವರನ್ನೊಳಗೊಂಡ ವಿಶೇಷ ಸಮಿತಿ ರಚಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

53 ವರ್ಷ ಪ್ರಾಯದ ರಾಮನ್ ಅವರು ಸದ್ಯ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕರ‍್ಯನರ‍್ವಹಿಸುತ್ತಿದ್ದಾರೆ. ರಾಮನ್ ಅವರು 11 ಟೆಸ್ಟ್​ ಹಾಗೂ 27 ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದರು. ಜೊತೆಗೆ ದ. ಆಫ್ರಿಕಾದಲ್ಲಿ ಭಾರತ ಪರ ಮೊದಲ ಟೆಸ್ಟ್​​ ಶತಕ ಬಾರಿಸಿದ ಕರ‍್ತಿ ರಾಮನ್​​ ಅವರಿಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ನನ್ನ ಹೆಗಲಮೇಲೆ ಹೊಸ ಜವಾಬ್ದಾರಿಯಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಇನ್ನಷ್ಟು ಗಟ್ಟಿಗೊಳಿಸಿ, ವಿಶ್ವ ಮಟ್ಟದಲ್ಲಿ ಬೆಳೆಸುವಂತಹ ಕೆಲಸ ಮಾಡುತ್ತೇನೆ’ ಎಂದು ರಾಮನ್ ಹೇಳಿದ್ದಾರೆ.

ಈ ಹಿಂದೆ ಮಹಿಳಾ ತಂಡದ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರು ಏಕದಿನ ಟಿ20 ವಿಶ್ವಕಪ್​​ನಲ್ಲಿ ಮಿಥಾಲಿ ರಾಜ್ ಆಯ್ಕೆ ವಿಚಾರವಾಗಿ ವಿವಾದಕ್ಕೆ ಸಿಲುಕಿದ್ದರು. ಹೀಗಾಗಿ ಪೊವಾರ್ ಅವರ ಕೋಚ್ ಅವಧಿ ನ. 30 ಕ್ಕೆ ಕೊನೆಯಾಗಿತ್ತು.