Monday, November 25, 2024
ಸುದ್ದಿ

ದೀನದಯಾಳ್ ಉಪಾಧ್ಯಾಯರ ನೆನಪಿನಲ್ಲಿ ದೀಪಾವಳಿಯಂದು ಸಾವಿರಾರು ಜನರಿಗೆ ದಾನಧರ್ಮ | ಬಡವರ ಆಶಾಕಿರಣ ಪುತ್ತೂರಿನ ಮುಂದಿನ ಶಾಸಕ ಆಶೋಕ್ ರೈ ..?

ಪುತ್ತೂರು : ಎಳವೆಯಲ್ಲೇ, ಇಪತ್ತು ರೂಪಾಯಿ ಜೇಬಿನಲ್ಲಿ ಇಟ್ಟುಕೊಂಡು ಮೈಸೂರಿಗೆ ಉನ್ನತ ಶಿಕ್ಷಕ್ಕೆಂದು ತೆರಳಿದ ಅಶೋಕ್ ರೈ ನಾಲ್ಕು ರೂಪಾಯಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು. ಸೈಕಲ್‌ಗಳಲ್ಲಿ ತೆರಳಿ ಜ್ಯೂಸ್ ಮಾರಾಟ ಮಾಡಿ ಹೊಟ್ಟೆ ಬಟ್ಟೆಕಟ್ಟಿ ಬಡತನದಲ್ಲಿ ಬದುಕನ್ನು ಸಾಗಿಸುತ್ತಾ, ರೆನೋಡ್ಸ್ ಕಂಪೆನಿಯ ಪೆನ್ನಿನ ಡೀಲರ್ ಶಿಪ್ ಪಡೆದು ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಆಟೋ ಓಡಿಸಿ, ಗಾಡಿ ಓಡಿಸಿ ಮಾರಟ ಮಾಡಿ ಡಿಗ್ರಿ ಮುಗಿಸುದರೊಳಗಾಗಿ ಸತತ ಪರಿಶ್ರಮ ಮತ್ತು ಶ್ರದ್ಧೆಯ ಫಲಶ್ರುತಿಯಾಗಿ ಕೋಟಿ ರೂಪಾಯಿ ಸಂಪಾದಿಸಿ ಕೀರ್ತಿ ಇವರದ್ದು. ಪ್ರಸ್ತುತ ದಕ್ಷಿಣ ಕನ್ನಡದ ಪ್ರತಿಷ್ಟಿತ ಉದ್ಯಮಿ, ರೈ ಎಸ್ಟೇಟ್ & ಬಿಲ್ಡರ್ಸ್ ನ ಮಾಲಕ, ತನ್ನ ಉದ್ಯಮದಿಂದ ಬಂದ ಲಾಭದ ಶೇಕಡ ಐವತ್ತು% ನ್ನು ಸಮಾಜಕ್ಕೆ ತನ್ನ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾವಿರಾರು ಬಡಕುಟುಂಬಗಳ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಉಚಿತ ಬಸ್ ಪಾಸ್, ಮನೆ ನಿರ್ಮಾಣ, ಆದಾರ್ ಕಾರ್ಡ್, ಉಚಿತ ವಾಹನ ತರಬೇತಿ ಮತ್ತು ಲೈಸನ್ಸ್ ಮಾಡಿಸಿಕೊಡುವ ಕಾರ್ಯ. ಹತ್ತಾರು ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ರುವಾರಿಯಾಗಿ, ಭಾರತೀಯ ಜನತಾಪಕ್ಷದ ಮೂಲಕ ಸಾವಿರಾರು ಜನರ ನೋವುಗಳಿಗೆ ಸ್ಪಂದಿಸಿ, ಸಮಾಜಮುಖಿ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ದೀಪಾಳಿಯ ಸಂದರ್ಭದಲ್ಲಿ ಹತ್ತು ಸಾವಿರ ಬಡವರಿಗೆ ವಸ್ತ್ರದಾನ :

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಾವಳಿಯ ಸಮಯದಲ್ಲಿ ಸುಮಾರು ಹತ್ತುವರ್ಷಗಳ ಹಿಂದೆ ರೈ ತಂದೆ ತಾಯಿ ಸೇರಿ ಎಪ್ಪತ್ತೈದು ಮಂದಿಗೆ ವಸ್ತ್ರದಾನ ಮಾಡುವ ಮೂಲಕ ಆರಂಭಿಸಿದ ಕಾರ್ಯ ಇಂದು ಬಾಯಿಂದ ಬಾಯಿಗೆ ಪ್ರಚಾರವಾಗಿ ಯಾವುದೇ ಜಾಹೀರಾತು ಇಲ್ಲದೆ ಬೇರೆ ಬೇರೆ ಊರುಗಳಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಪ್ರಸ್ತುತ ವರ್ಷ ಹತ್ತು ಸಾವಿರ ಮಂದಿಗೆ ವಸ್ತ್ರವಿತರಣೆ ನಡೆಯುತ್ತಿದ್ದು. ಸಾವಿರಾರು ಮಂದಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅನೇಕ ಸಮಾಜದ ಗಣ್ಯರು, ಮುಖಂಡರು ಭಾಗವಹಿಸಿ ಆಶೋಕ್ ರೈ ಕಾರ್ಯಕ್ಕೆ ಶ್ಲಾಗನೆಯನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಜನತಾ ಪಕ್ಷದ ಕಟ್ಟಾಳು, ಹಿಂದುತ್ವದ ಹರಿಕಾರ, ಪುತ್ತೂರಿನ ಅಭ್ಯರ್ಥಿ ?

ಹುಟ್ಟಿನಿಂದ ಸಂಘದ ಶಾಖೆ, ಬೈಠಕ್ ಗಳಲ್ಲಿ ಭಾಗವಹಿಸುತ್ತಾ, ಆರ್.ಎಸ್.ಎಸ್.ನ ವಿಚಾರಧಾರೆಯ ಅಡಿಯಲ್ಲಿ ಬೆಳೆದು ಬಂದ ಅಶೋಕ್ ರೈ ತನ್ನ ಸಮಾಜಿಕ ಚಟುವಟಿಕೆಗಳನ್ನು ಉದ್ಯಮದ ಜೊತೆ ಜೊತೆಗೆಮ ಆರಂಭಿಸಿದವರು. ತ್ಯಾಗೇ ನೈಕೇ ಅಮೃತತ್ವ ಮಾನುಶುಃ ಎಂಬ ಮಾತನ್ನು ಅಕ್ಷರಶಃ ಸತ್ಯಗೊಳಿಸುತ್ತಿರುವವರು. ಸಮಾಜಿಕ ಚುಟುವಟಿಗಳನ್ನು ಗಮಸಿದ ಸಂಘದ ಹಿರಿಯರು ರೈಯವರನ್ನು ಭಾರತೀಯ ಜನತಾ ಪಕ್ಷದ ಜವಾಬ್ದಾರಿಯನ್ನು ನೀಡಿ ತಮ್ಮ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿದರು. ಪ್ರಸ್ತುತ ಪುತ್ತೂರಿನಲ್ಲಿ ಮನೆ ಮಾತಾಗಿರುವ ರೈಯವರನ್ನೇ ರಣಕ್ಕಿಳಿಸುವ ಚಿಂತನೆಯನ್ನು ಬಿ.ಜೆ.ಪಿ. ಮಾಡಿದೆ ಎನ್ನಲಾಗುತ್ತಿದೆ. ಆಪಾರ ಕಾರ್ಯಕರ್ತರ ಬಳಗ ಮತ್ತು ಅಶೋಕ್ ರೈ ಕಾರ್ಯಕ್ಕೆ ಪ್ರಧಾನಿ ಮೋದಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೈಗಳನ್ನು ಶ್ಲಾಗಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮಸಿದರೆ ಬಹುತೇಕ ಅಶೋಕ್ ರೈ ಮುಂದಿನ ಪುತ್ತೂರು ಶಾಸಕರಾಗುವುದು ಖಚಿತ.

https://youtu.be/PP14g6leFK0

Leave a Response