Tuesday, January 21, 2025
ಸುದ್ದಿ

ಸುಬ್ರಹ್ಮಣ್ಯ ವ್ಯಾಪ್ತಿಯ ಕಾಯಂಬಾಡಿಯಲ್ಲಿ ಅಡಿಕೆಮರ ಬಿದ್ದು ವ್ಯಕ್ತಿ ಸಾವು- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕಾಯಂಬಾಡಿ ಶ್ರೀ ಲಕ್ಷೀ ನರಸಿಂಹ ದೇವಸ್ಥಾನದ ಜಿರ್ಣೋದ್ದಾರ ನಡೆಯುತ್ತಿದೆ. ಈ ಪ್ರಯುಕ್ತ ಜೀರ್ಣೋದ್ದಾರದ ಶ್ರಮದಾನದ ವೇಳೆ. ಡಿ. 21 ಶುಕ್ರವಾರ ಬೆಳಗ್ಗೆ ಶ್ರಮದಾನ ಕಾರ್ಯದಲ್ಲಿ ತೊಡಗಿದ್ದ ಕಾಯಂಬಾಡಿ ನಿವಾಸಿ ಸುಮಾರು 60 ಪ್ರಾಯದ ಚೆನ್ನಪ್ಪ ಗೌಡ ಎಂಬವರ ಮೇಲೆ ಏಕಾಏಕಿ ಒಂದು ಅಡಿಕೆ ಮರ ಬಿದ್ದು ಗಂಭೀರ ಗಾಯ ಗೊಂಡು ಸ್ಥಳದಲ್ಲೇ ಮೃತ ಪಟ್ಟಿದಾರೆ.

ಈ ವಿಷಯ ತಿಳಿದ ಕಾಯಂಬಾಡಿ ನಿವಾಸಿಯಾದ ಸತ್ಯನಾರಾಯಣ ಭಟ್ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿರುತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದ ಸುಬ್ರಹ್ಮಣ್ಯ ಠಾಣಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು