Monday, January 20, 2025
ಸುದ್ದಿ

ಬಂಟ್ವಾಳ ಗೃಹರಕ್ಷಕ ಘಟಕದ ವಾರದ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಗೃಹರಕ್ಷಕ ಘಟಕದ ವಾರದ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿ ವಾರದ ಕವಾಯತು ವೀಕ್ಷಣೆ ನಡೆಸಿದರು.

ನಂತರ ಬಂಟ್ವಾಳ ಘಟಕದಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿದ ಐತ್ತಪ್ಪರವರನ್ನು ತಿಂಗಳ ಗೃಹರಕ್ಷಕರಾಗಿ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಜಿಲ್ಲಾ ಕಮಾಡೆಂಟ್ ಗೃಹರಕ್ಷಕ ಐತ್ತಪ್ಪರವರ 26 ವರ್ಷದ ಸೇವೆ ಇಲಾಖೆ ಗೌರವ ತಂದಿದೆ ಗೃಹರಕ್ಷಕರು ಸಮಾಜದ ಆಸ್ತಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ವಿವಿಧ ಇಲಾಖೆಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು 3 ತಿಂಗಳಿಗೊಮ್ಮೆ ಬದಲಾವಣೆ ಮಾಡಲು ಘಟಕಾಧಿಕಾರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಘಟಕಾಧಿಕಾರಿ ಶ್ರೀನಿವಾಸ್ ಆಚಾರ್ಯ ಸ್ವಾಗತಿಸಿದರು. ಬಂಟ್ವಾಳ ಘಟಕದ ಹಿರಿಯ ಗೃಹರಕ್ಷಕ ಶಿವರಾಜ್ ವಂದಿಸಿದರು. ಈ ವೇಳೆಗೆ ಬಂಟ್ವಾಳ ಮಾಜಿ ಘಟಕಾಧಿಕಾರಿ ಕೃಷ್ಣ ನಾಯಕ್ ,ಹಾಗೂ ಘಟಕದ 65 ಗೃಹರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.